Published
9 hours agoon
By
Akkare Newsನಿರ್ಮಾಣ ವಲಯದಲ್ಲಿ ಬಳಸುವ ಮತ್ತು 10 ಲಕ್ಷ ರೂ. ಒಳಗಿನ ವಾಣಿಜ್ಯ ವಾಹನಗಳ ನೋಂದಣಿ ಶುಲ್ಕ ಮೇ 1 ರಿಂದ ಏರಿಕೆಯಾಗಲಿದೆ.
ವಾಣಿಜ್ಯ ವಾಹನ ನಿರ್ವಾಹಕರ ವಿರೋಧದ ಹೊರತಾಗಿಯೂ, ರಾಜ್ಯ ಸರ್ಕಾರವು ಮೇ 1 ರಂದು ಕರ್ನಾಟಕ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರುತ್ತಿದೆ.
ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಅನು ಮೋದನೆ ನೀಡಲಾಗಿದ್ದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ಅದರಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಕ್ಯಾಬ್‌ಗಳಿಗೆ ಜೀವಿತಾವಧಿ ತೆರಿಗೆಯು ವಾಹನದ ವೆಚ್ಚದ ಶೇ.5 ಆಗಿರುತ್ತದೆ. ಇಲ್ಲಿಯವರೆಗೆ, ಏಕಕಾಲದಲ್ಲಿ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ವಾಣಿಜ್ಯ ವಾಹನಗಳಿಗೆ (ಟ್ಯಾಕ್ಸಿಗಳು) ಜೀವಿತಾವಧಿ ತೆರಿಗೆಗಳನ್ನು ವಿಧಿಸಲಾಗುತ್ತಿರಲಿಲ್ಲ, ಬದಲಿಗೆ ನಾಲ್ಕು ಆಸನಗಳ ವಾಹನಕ್ಕೆ ಪ್ರತಿ ಸೀಟಿಗೆ 100 ರೂ. ದರದಲ್ಲಿ ತ್ರೈಮಾಸಿಕವಾಗಿ ತೆರಿಗೆಗಳನ್ನು ಸಂಗ್ರಹಿಸಲಾಗುತ್ತಿತ್ತು.
ತಿದ್ದುಪಡಿ ಕಾಯ್ದೆಯಂತೆ 10 ಲಕ್ಷ ರೂ.ಗಳ ಒಳಗಿನ ಬೆಲೆಯ ವಾಹನಗಳನ್ನು ಹೆಚ್ಚಾಗಿ ವಾಣಿಜ್ಯ ವಾಹನಗಳಾಗಿರುತ್ತವೆ. ಇವರು ನೋಂದಣಿ ಸಮಯದಲ್ಲಿ ಒಂದೇ ಬಾರಿಗೆ ಸುಮಾರು 50,000 ರೂ.ಗಳ ಜೀವಿತಾವಧಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ನವೀಕರಿಸಿದ ಸ್ಲ್ಯಾಬ್‌ಗಳ ಪ್ರಕಾರ, 10-15 ಲಕ್ಷ ರೂ.ಗಳ ಒಳಗೆ ಬೆಲೆಯ ವಾಹನಗಳನ್ನು ಖರೀದಿಸುವವರು ವಾಹನ ವೆಚ್ಚದ ಶೇ.9 ಅನ್ನು ಜೀವಿತಾವಧಿ ತೆರಿಗೆಯಾಗಿ ಪಾವತಿಸಬೇಕಾಗುತ್ತದೆ. 15 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ವಾಹನಗಳನ್ನು ಖರೀದಿಸುವವರು ವಾಹನ ವೆಚ್ಚಕ್ಕೆ ಶೇ.15ರಷ್ಟು ಹಣ ಪಾವತಿಸಬೇಕಾಗುತ್ತದೆ.