Connect with us

ಇತರ

ಅಕ್ಷಯ ತೃತೀಯಾ ದಿನ 2 ಟನ್‌ ಚಿನ್ನ ಮಾರಾಟ!

Published

on

ಬೆಂಗಳೂರು: ಅಕ್ಷಯ ತೃತೀಯಾ ದಿನ ವಾದ ಬುಧವಾರ ರಾಜ್ಯದೆಲ್ಲೆಡೆ ಚಿನ್ನಾಭರಣಗಳ ಖರೀದಿ ಜೋರಾಗಿದ್ದು ರಾಜ್ಯದಲ್ಲಿ ಬರೋಬ್ಬರಿ 2 ಟನ್‌ ಚಿನ್ನ ಮಾರಾಟವಾಗಿದ್ದು, 1,700 ಕೋಟಿ ರೂ. ನಿಂದ 1,800 ಕೋಟಿ. ರೂ. ವಹಿವಾಟು ನಡೆದಿದೆ ಎಂದು ಮೂಲಗಳು ತಿಳಿಸಿದೆ.

ಕಳೆದ ವರ್ಷವೂ ರಾಜ್ಯದಲ್ಲಿ ಸುಮಾರು 2 ಟನ್‌ನಷ್ಟೇ ವಹಿವಾಟು ನಡೆದಿದ್ದರೂ ಬೆಲೆ ಕಡಿಮೆ ಇದ್ದದ್ದರಿಂದ ವಹಿವಾಟಿನ ಮೊತ್ತವು 700 ಕೋಟಿ ರೂ.ನಿಂದ 800 ಕೋಟಿ ರೂ. ನಷ್ಟಿತ್ತು ಎಂದು ಅಂದಾಜಿಸಲಾಗಿದೆ.

 

ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಹಾಗೂ ಈ ವರ್ಷದ ಮಾರಾಟ ಪ್ರಮಾಣವು ಸರಿಸಮನಾಗಿದೆ. ರಾಜ್ಯದ ಚಿನ್ನದ ವಹಿವಾಟಿನಲ್ಲಿ ಶೇ. 60ರಷ್ಟು ಬೆಂಗಳೂರಿನಲ್ಲಿಯೇ ನಡೆದಿದ್ದು, ಇನ್ನುಳಿದಂತೆ  ಪುತ್ತೂರು,ಹುಬ್ಬಳ್ಳಿ, ಮಂಗಳೂರು, ಮೈಸೂರಿನಲ್ಲಿ ಅಧಿಕ ವ್ಯಾಪಾರ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.


 

Continue Reading
Click to comment

Leave a Reply

Your email address will not be published. Required fields are marked *

Advertisement