Connect with us

ಇತರ

ಪುತ್ತೂರಿನ ಧರ್ಮಶಿಕ್ಷಣ ತರಗತಿಗಳಿಗೆ ಶೃಂಗೇರಿ ಜಗದ್ಗುರುಗಳಿಂದ ಚಾಲನೆ

Published

on

ಪುತ್ತೂರು: ದೇಶದಲ್ಲೇ ಪ್ರಥಮವಾಗಿ ಪುತ್ತೂರಿನಲ್ಲಿ ಜಾರಿಗೊಳ್ಳಲಿರುವ ಹಿಂದೂ ಧರ್ಮ ಶಿಕ್ಷಣ ತರಗತಿಗಳಿಗೆ ಶ್ರೀ ಕ್ಷೇತ್ರ ಶೃಂಗೇರಿ ಯಲ್ಲಿ ಸೋಮವಾರ ಚಾಲನೆ ನೀಡಲಾಯಿತು.

ಧಾರ್ಮಿಕ ಶಿಕ್ಷಣದ ಮಾರ್ಗದರ್ಶ ಕರೂ ಪ್ರೇರಕರೂ ಆದ ಶೃಂಗೇರಿ ಮಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಧರ್ಮ ಶಿಕ್ಷಣ ತರಗತಿ “ಧರ್ಮಾಭ್ಯುದಯ’ವನ್ನು ಉದ್ಘಾಟಿಸಿ, ಹಿಂದೂ ಧರ್ಮವೆಂಬುದು ಅನಾದಿ ಕಾಲದಿಂದ ಬಂದ ಸನಾತನ ಧರ್ಮ. ಎಷ್ಟೇ ಜನ ಈ ಧರ್ಮವನ್ನು ನಾಶ ಗೊಳಿಸುತ್ತೇವೆಂದು ಅಂದುಕೊಂಡರೂ ಅಸಾಧ್ಯ ಎಂದರು.

ಧರ್ಮದ ಮೇಲೆ ದಾಳಿಗಳಾದಾಗ ರಕ್ಷಣೆಗಾಗಿ ಭಗವಂತ ಬರಲಿಲ್ಲ ಎನ್ನು ತ್ತೇವೆ. ಭಗವಂತ ಬರಲಿಲ್ಲ ಎಂಬುದರ ಅರ್ಥ ಆ ದಾಳಿ ತಡೆಯುವ ಶಕ್ತಿ ನಮ್ಮಲ್ಲೇ ಇದೆ ಎಂಬುದು. ನಾವೆಲ್ಲರೂಒಗ್ಗಟ್ಟಾದರೆ ಎಂತಹ ದಾಳಿಯನ್ನೂ ಎದುರಿಸಬಹುದು. ನಮ್ಮಿಂದ ಧರ್ಮ ರಕ್ಷಣೆ ಅಸಾಧ್ಯವಾದಾಗಲಷ್ಟೇ ಭಗವಂತ ಆಗಮಿಸುತ್ತಾನೆ ಎಂದರು.

ಶ್ರೀ ಗುರುಗಳಿಗೆ ಫಲಪುಷ್ಪ ಸಮರ್ಪಿಸ ಲಾಯಿತು. ಮಠದ ವಿ| ತೇಜಶಂಕರ ಸೋಮಯಾಜಿ ನಿರ್ವಹಿಸಿದರು.

ಧರ್ಮ ಶಿಕ್ಷಣ ಜಾರಿ ಹಿನ್ನೆಲೆಯಲ್ಲಿ ಪುತ್ತೂರು, ಕಡಬ ತಾಲೂಕುಗಳ ನಾನಾ ಭಾಗಗಳಲ್ಲಿ ಗ್ರಾಮ ಸಮಿತಿ ರಚಿಸಿದ್ದು, ಆ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಹಿಂದೂ ಕಾರ್ಯಕರ್ತರನ್ನೊಳಗೊಂಡು ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಮಾರಂಭದಲ್ಲಿ ಭಾಗಿಯಾದರು.

 

.

ಶ್ರೀ ಮಹಾಲಿಂಗೇಶ್ವರ ದೇಗುಲ ಆವರಣದಿಂದ 50ಕ್ಕೂ ಹೆಚ್ಚು ಬಸ್ಸು ಗಳಲ್ಲಿ ಕಾರ್ಯಕರ್ತರು ಶೃಂಗೇರಿಗೆ ತೆರಳಿದರು. ಶ್ರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ ಶುಭ ಹಾರೈಸಿದರು. ತಾಲೂಕು ಧರ್ಮ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಸಂಚಾಲಕ ಸುಬ್ರಮಣ್ಯ ನಟ್ಟೋಜ, ಧಾರ್ಮಿಕ ಶಿಕ್ಷಣ ನೇತಾರರಾದ ಮೊಗೆರೋಡಿ ಬಾಲಕೃಷ್ಣ ರೈ, ಎನ್‌.ಕೆ.ಜಗನ್ನಿವಾಸ ರಾವ್‌, ಜಯಸೂರ್ಯ ರೈ ಮಾದೋಡಿ, ಆರ್‌.ಸಿ.ನಾರಾಯಣ, ಮಾಧವ ಸ್ವಾಮಿ, ಶೈಲೇಶ್‌ ರಾವ್‌, ದಿನೇಶ್‌ ಜೈನ್‌ ಇದ್ದರು.

ಧರ್ಮಾಭ್ಯುದಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಧರ್ಮ ಶಿಕ್ಷಣ ತರಗತಿಗಳಿಗೆ ಧರ್ಮಾಭ್ಯುದಯ ಎಂದು ನಾಮಕರಣ ಮಾಡಿದ್ದಾರೆ. ಸ್ವತಃ ಜಗದ್ಗುರುಗಳೇ ಈ ಹೆಸರನ್ನು ನೀಡಿ ಧರ್ಮದ ಉಳಿವು ಬೆಳೆವಿಗಾಗಿ ಹರಸಿದ್ದು ವಿಶೇಷವಾಗಿತ್ತು.

 

Continue Reading
Click to comment

Leave a Reply

Your email address will not be published. Required fields are marked *

Advertisement