Published
10 hours agoon
By
Akkare Newsಪುತ್ತೂರು: ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೋತ್ಸವದ ವ್ಯವಸ್ಥಾಪನಾ ಸಮಿತಿಯ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಸದಾನಂದ ಶೆಟ್ಟಿ ಕೂರೇಲು ಅವರು ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ.
‘ದೇವಸ್ಥಾನದಲ್ಲಿ ಮೇ.9ರಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಸಲಾಯಿತು. ಆಡಳಿತಾಧಿಕಾರಿ ಗೋಪಾಲ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಸದಸ್ಯರಾದ ಚೆನ್ನಪ್ಪ ಮರಿಕೆ, ಪೂರ್ಣಿಮಾ ರೈ, ಪವಿತ್ರ ರೈ, ಉಷಾ ಎಸ್. ಆಳ್ವ, ಯಾಧವಕೃಷ್ಣ ಗೌಡ, ಹರಿಶ್ಚಂದ್ರ, ಪ್ರಜ್ವಲ್ ರೈ ತೊಟ್ಲ ಉಪಸ್ಥಿತರಿದ್ದರು.