Connect with us

ಇತರ

ರಕ್ತಸಿಕ್ತ ಕಾರಿನಲ್ಲಿದ್ದ ವ್ಯಕ್ತಿಯ ಮೃತದೇಹ ಪತ್ತೆ

Published

on

ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿ ಮಾಗೇರಿಯ ಸಮೀಪ ಕಲ್ಲಹಳ್ಳಿ ಗ್ರಾಮದಲ್ಲಿ ಜನವಸತಿ ಪ್ರದೇಶದಲ್ಲಿ ರಕ್ತಸಿಕ್ತವಾದ ಕಾರು ನಿಲ್ಲಿಸಿ ಮತ್ತೊಂದು ಕಾರಿನಲ್ಲಿ ಶನಿವಾರ ಬೆಳಗಿನ ಜಾವ ಪರಾರಿಯಾದ ಘಟನೆ ಅಂತ್ಯ ಕಂಡಿದೆ. ಅವರ ಮೃತ ದೇಹ ಪತ್ತೆ ಆಗಿದೆ.

ಈ ಗ್ರಾಮಕ್ಕೆ ತೋಟದ ಕೆಲಸಕ್ಕೆ ಜನ ಕರೆತಂದ ಕಾರಿನ ಚಾಲಕ ಅಪರಿಚಿತ ಕಾರನ್ನು ರಕ್ತಸಿಕ್ತ ಆಗಿರುವ ಮಾಹಿತಿಯನ್ನು ಗ್ರಾಮಸ್ತರಿಗೆ ತಿಳಿಸಿದ್ದರು ನಂತರ ಯಸಳೂರು ಪೋಲಿಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಯಸಲೂರು ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಹಾಗೂ ಸಿಬ್ಬಂದಿಗಳು ಸ್ಥಳ ಪರೀಶೀಲನೆ ನಡೆಸಿದ್ದಾರೆ ಇದಕ್ಕೆ ತನಿಖೆಗಾಗಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸಹ ಸ್ಥಳಕ್ಕೆ ಬಂದು ಮಹಜರ್ ಮಾಡಿ ತನಿಖೆ ಚುರುಕು ಗೊಳಿಸಿದ್ದಾರೆ .

 

ಘಟನೆಯ ತನಿಖೆ ಮುಂದುವರಿದಂತೆ ಈ ಕಾರು ಕೊಡಗಿನ ಕುಶಾಲನಗರದ ಉದ್ಯಮಿಯಾದ ಜಾನ್ ರವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ಜಾನ್ ರವರ ಹತ್ತಿರ ಕುಶಾಲನಗರದಲ್ಲಿ ವಾಸವಿರುವ ಸೋಮವಾರಪೇಟೆ ತಾಲ್ಲೂಕು ಕಕ್ಕೆ ಹೊಳೆ ಜಂಗ್ಸನ್ ನಿವಾಸಿ ಯಾದ ಸಂಪತ್ (ಶಂಭು) ರವರು ಶನಿವಾರ ತೆಗೆದು ಕೊಂಡು ಬಂದಿರುತ್ತಾರೆ ಎಂದು ತಿಳಿದು ಬಂದಿದೆ.

 

ಆದರೆ ಇಲ್ಲಿಯ ತನಕ ಸಂಪತ್ ಮೊಬೈಲ್ ಸ್ವಿಚ್ ಆಫ್ ಅಗಿದ್ದು ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಮೊಬೈಲುಗಳಲ್ಲಿ ಬಂದಿರುವ ಕೊನೆಯ ಕರೆಗಳ ಮಾಹಿತಿಗಳನ್ನು ಕಲೆ ಹಾಕಲಾಗಿತ್ತು. ಜೊತೆಗೆ ಈ ಹಿಂದೆ ನಡೆದ ಗಲಾಟೆ ಘರ್ಷಣೆ ಯ ಎದುರಾಳಿಗಳನ್ನು ಪೊಲೀಸರು ವಿಚಾರಣೆ ನಡೆಸಿದರು. ಇದರಲ್ಲಿ ಕೆಲವು ಜನರೂ ಊರು ಬಿಟ್ಟಿದ್ದು ಇನ್ನೂ ಕೆಲವರು ವಿಚಾರಣೆಗೆ ಸಹಕರಿಸಿದ್ದಾರೆ. ಇನ್ನು ಕೆಲವರು ಪೋಲಿಸ್ ಕರೆಗಳನ್ನು ಉತ್ತರಿಸಿ ಫೋನ್ ಸ್ವಿಚ್ ಆಫ್ ಮಾಡಿ ಮನೆಗೆ ಬಾರದೆ ತಲೆಮರೆಸಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಯಸಳುರು ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಮತ್ತು ಸಿಬ್ಬಂದಿವರ್ಗ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಈ ಪ್ರದೇಶದ ಸುತ್ತ ಮುತ್ತ ಹುಡುಕಾಟ ನಡೆಸಿದ ಬಳಿಕ ಮೃತ ದೇಹ ಪತ್ತೆ ಆಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement