Published
16 hours agoon
By
Akkare Newsಉಪ್ಪಿನಂಗಡಿ: ಕೆಸ್ಸಾರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯಪ್ರದೇಶ ಮೂಲದ ವ್ಯಕ್ತಿಯೋರ್ವ ಮೂತ್ರ ವಿಸರ್ಜನೆ ನೆಪದಲ್ಲಿ ಶಿರಾಡಿ ಘಾಟಿ ಪ್ರದೇಶ ದಲ್ಲಿ ಇಳಿದಿದ್ದು ಬಳಿಕ ಕಣ್ಮರೆಯಾಗಿದ್ದಾನೆ. ಆತನ ಪತ್ತೆಗಾಗಿ ಬಸ್ಸಿನ ನಿರ್ವಾಹಕ ಪೊಲೀಸರ ಮೊರೆಹೊಕ್ಕ ಘಟನೆ ಮೇ 14ರ ತಡರಾತ್ರಿ ಸಂಭವಿಸಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿ ಮಧ್ಯಪ್ರದೇಶ ಮೂಲದ ಶ್ರೀಪಾಲ್ ನರ್ರೆ (37) ಪ್ರಯಾಣಿಸುತ್ತಿದ್ದ. ಶಿರಾಡಿ ಘಾಟಿ ತಲುಪುತ್ತಿದ್ದಂತೆ ತನಗೆ ಬಸ್ಸಿನಿಂದ ಇಳಿಯಬೇಕೆಂದು ವಿನಂತಿಸಿದ್ದ. ಮೂತ್ರ ವಿಸರ್ಜನೆಯ ಕಾರಣ ಇರಬೇಕೆಂದು ಭಾವಿಸಿದ ನಿರ್ವಾಹಕ ಬಸ್ಸನ್ನು ನಿಲ್ಲಿಸುತ್ತಿದ್ದಂತೆ ಕೆಳಗೆ ಇಳಿದವನೇ ಹೆದ್ದಾರಿಯಲ್ಲಿ ಓಡಿ ಹೋದನು. ಮರಳದೇ ಇದ್ದಾಗ ಬಸ್ಸನ್ನು ಚಲಾಯಿಸಿಕೊಂಡು ಬಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.