Published
1 year agoon
By
Akkare Newsಈ ಆಧುನಿಕ ಯುಗದಲ್ಲಿ ಮೊಬೈಲ್ (Mobile) ಉಪಯೋಗಿಸದವರು ಯಾರೂ ಇಲ್ಲ. ಪ್ರತಿಯೊಬ್ಬರ ಅತ್ಯಗತ್ಯ ಸಾಧನಗಳಲ್ಲಿ ಒಂದಾಗಿದ್ದು, ಇದರ ಮೂಲಕ ಹಲವು ಕಾರ್ಯಗಳು ಸುಲಲಿತವಾಗಿದೆ. ಇದೇ ಕಾರಣದಿಂದಾಗಿ ಸ್ಮಾರ್ಟ್ ಫೋನ್ ಇಲ್ಲದೆ ಜೀವಿಸುವುದು ಕೂಡ ಕಷ್ಟಕರ ಎನ್ನುವ ಹಂತದಲ್ಲಿ ನಾವಿದ್ದೇವೆ.
ಇದರಿಂದ ಮೊಬೈಲ್ ನಲ್ಲಿ ಚಾರ್ಜ್ (Charge) ಖಾಲಿಯಾಗದಂತೆ ನೋಡಿಕೊಳ್ಳುವುದೇ ಒಂದು ಕೆಲಸವಾಗಿಬಿಟ್ಟಿದೆ. ಪ್ರಾರಂಭದಲ್ಲಿ ಹೆಚ್ಚು ಕಾಲ ಬಾಳಿಕೆ ಬರುವ ಬ್ಯಾಟರಿ, ನಂತರದ ದಿನಗಳಲ್ಲಿ ನಾವು ಮೊಬೈಲ್ ಉಪಯೋಗಿಸಿದಂತೆಯೇ ದಿನದಿಂದ ದಿನಕ್ಕೆ ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತಾ ಹೋಗುತ್ತದೆ. ಹಾಗಾಗಿ ಬ್ಯಾಟರಿ ಬ್ಯಾಕಪ್ ನ ಚಿಂತೆ ಎಲ್ಲರಲ್ಲೂ ಮನೆ ಮಾಡಿರುತ್ತದೆ. ಬ್ಯಾಟರಿ ಬ್ಯಾಕಪ್ ಕಡಿಮೆಯಾಗುತ್ತಾ ಹೋದಂತೆ ಬಳಕೆದಾರರಾದ ನಮಗೆ ಸ್ವಲ್ಪ ಕಿರಿಕಿರಿ ಅನಿಸುತ್ತದೆ. ಆದರೆ ಬಳಕೆ ಮಾಡುವಾಗ ಈ ಕೆಳಗಿನ ಅಂಶಗಳನ್ನು ಅನುಸರಿಸಿದರೆ, ಖಂಡಿತವಾಗಿಯೂ ಮೊಬೈಲ್ ಬ್ಯಾಟರಿ ಬ್ಯಾಕಪ್ (Battery Backup) ಕಡಿಮೆಯಾಗುವುದಿಲ್ಲ. ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.
ಆಟೋ ಬ್ರೈಟ್ ನೆಸ್ (Auto Brightness) ಆನ್ ಮಾಡಿ:
ಬ್ಯಾಟರಿ ಬಾಳಿಕೆಯನ್ನು ಉತ್ತಮಗೊಳಿಸಲು ಮುಖ್ಯವಾದ ಕೆಲಸ ಇದಾಗಿದೆ. ಹೆಚ್ಚು ಬ್ರೈಟ್ನೆಸ್ ಇರುವಷ್ಟು ಹೊತ್ತು ನಿಮ್ಮ ಮೊಬೈಲ್ ನ ಬ್ಯಾಟರಿ ಚಾರ್ಜ್ ಕಡಿಮೆಯಾಗುತ್ತಾ ಹೋಗುತ್ತದೆ. ಹಾಗಾಗಿ ನಿಮ್ಮ ಮೊಬೈಲ್ ನಲ್ಲಿ ಬ್ರೈಟ್ನೆಸ್ ಕಡಿಮೆ ಮಾಡುವುದು ಅಥವಾ ಆಟೋ ಬ್ರೈಟ್ ನೆಸ್ ಆನ್ ಮಾಡುವುದೇ ಉತ್ತಮ.
ಬ್ಯಾಟರಿ ಫುಲ್ ಡೆಡ್ (Battery dead) ಆಗಲು ಬಿಡಬೇಡಿ:
ನಮ್ಮ ದೇಹಕ್ಕೆ ಜೀವ ಹೇಗೆ ಮುಖ್ಯವೋ ಹಾಗೆಯೇ ಮೊಬೈಲ್ ಗೆ ಬ್ಯಾಟರಿ ಕೂಡ ಅಷ್ಟೇ ಮುಖ್ಯವಾಗಿದೆ. ಆದ್ದರಿಂದ ಮೊಬೈಲಲ್ಲಿ ಚಾರ್ಜ್ ಕಡಿಮೆ ಇರುವ ಸಂದರ್ಭದಲ್ಲಿ ಆದಷ್ಟು ಕಡಿಮೆ ಮಾಡಿ. ಫೋನ್ ಬ್ಯಾಟರಿ ಸಂಪೂರ್ಣ ಖಾಲಿ ಆಗುವವರಿಗೆ ಕಾಯಬೇಡಿ. ಇದರಿಂದ ಬ್ಯಾಟರಿ ಡೆಡ್ ಆಗುವ ಸಾಧ್ಯತೆಯಿದ್ದು, ಫೋನಿಗೂ ಕೂಡ ಹಾನಿಯಾಗಬಹುದು. ಹಾಗಾಗಿ ಕನಿಷ್ಠ 20% ಗಿಂತ ಕಡಿಮೆ ಬ್ಯಾಟರಿ ತೋರಿಸುವ ಮೊದಲೇ ಫೋನ್ ಚಾರ್ಜ್ ಮಾಡುವುದು ಉತ್ತಮ.
ಬ್ಯಾಕ್ ಗ್ರೌಂಡ್ ಅಪ್ಲಿಕೇಶನ್ (Background Apps) ಆಫ್ ಮಾಡಿ:
ಮೊಬೈಲ್ ನ ಸ್ಕ್ರೀನ್ ಆಫ್ ಇರುವಾಗಲೂ ಕೂಡ ಹಿನ್ನೆಲೆಯಲ್ಲಿ ಅಪ್ಲಿಕೇಶನ್ಗಳು ರನ್ ಆಗ್ತಾ ಇರುತ್ತದೆ. ಇದರಿಂದಾಗಿ ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತಾ ಹೋಗುತ್ತದೆ. ಬ್ಯಾಕ್ಗ್ರೌಂಡ್ ಅಪ್ಲಿಕೇಶನ್ಗಳನ್ನು ಸೆಟ್ಟಿಂಗ್ ನ ಮೂಲಕ ಆಫ್ ಮಾಡಿ. ಅಂತಹ ಅಪ್ಲಿಕೇಶನ್ಗಳು ಅಗತ್ಯವಿಲ್ಲದಿದ್ದರೆ ಡಿಲೀಟ್ ಮಾಡುವುದೇ ಉತ್ತಮ.
ಡಾರ್ಕ್ ಮೋಡ್ (Dark mode) ಅನ್ನು ಉಪಯೋಗಿಸಿ:
ಮುಂಬೈ ಬೆಳಕಿದಾರರಿಗೆ ತಮ್ಮ ಫೋನ್ ಬ್ಯಾಟರಿ ಬಾಳಿಕೆಯ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಡಾರ್ಕ್ ಥೀಮ್ ಅನ್ನು ಹೊರತಂದಿದೆ. ನಿಮ್ಮ ಮೊಬೈಲ್ಗಳಲ್ಲಿ ಡಾರ್ಕ್ ಮೂಡ್ ಅನ್ನು ಆನ್ ಮಾಡುವುದರಿಂದ ಬ್ಯಾಟರಿ ದುರ್ಬಳಕೆ ಆಗುವುದನ್ನು ಕಡಿಮೆ ಮಾಡಬಹುದು.
ಮೊಬೈಲ್ ಚಾರ್ಜ್ ಗೆ ಇಡುವಾಗ ಈ ಕ್ರಮಗಳನ್ನು ಅನುಸರಿಸಿ:
ಸಾಮಾನ್ಯವಾಗಿ ಹೆಚ್ಚಿನ ಮೊಬೈಲ್ ಬಳಕೆದಾರರು ಬ್ಯಾಟರಿ ಫುಲ್ ಆಗುವವರೆಗೂ ಚಾರ್ಜ್ ನಿಂದ ತೆಗೆಯುವುದಿಲ್ಲ. ಆದರೆ ಇದು ಬ್ಯಾಟರಿಯ ಹಿತ ದೃಷ್ಟಿಯಿಂದ ಸೂಕ್ತವಲ್ಲ . ಹಾಗಾಗಿ ಬ್ಯಾಟರಿ 90% ದಾಟಿದಾಗಲೇ ಮೊಬೈಲ್ ಚಾರ್ಜ್ ಮಾಡುವುದನ್ನು ನಿಲ್ಲಿಸಿ. ಇದು ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿಯ ದಕ್ಷತೆಯನ್ನು ಹೆಚ್ಚಿಸುತ್ತದೆ.
ರಿಫ್ರೆಶ್ ರೇಟನ್ನು (Refresh Rate) 60Hz ನಲ್ಲಿ ಇರಿಸಿ:
ಇತ್ತೀಚೆಗಿನ ಮೊಬೈಲ್ ಫೋನ್ ಗಳಲ್ಲಿ 165 Hz ರಿಫ್ರೆಶ್ ದರದವರೆಗೂ ಆಯ್ಕೆಗಳನ್ನು ಹೊಂದಿರುತ್ತದೆ. ಹಾಗೆಯೇ ಫೋನ್ ಗಳು ರಿಫ್ರೆಶ್ ರೇಟನ್ನು 60 Hz ಗೆ ಹೊಂದಿಸುವ ಆಯ್ಕೆಯನ್ನು ಕೂಡ ಹೊಂದಿದೆ. ಈ ರಿಫ್ರೆಶ್ ರೇಟ್ ಹೆಚ್ಚಾಗಿದ್ದಲ್ಲಿ ಬ್ಯಾಟರಿ ಬಳಕೆ ಹೆಚ್ಚಾಗುವುದರಿಂದಾಗಿ ಇದನ್ನು 60 Hz ನಲ್ಲಿ ಹೊಂದಿಸುವುದು ಸೂಕ್ತ.
ಪವರ್ ಸೇವ್ ಮೋಡ್ (Power Saving Mode) ಆನ್ ಮಾಡಿ:
ಈ ಆಯ್ಕೆ ನಿಮ್ಮ ಮೊಬೈಲ್ ನ ಬ್ಯಾಟರಿ ದಕ್ಷತೆಯನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಪವರ್ ಸೇವ್ ಮೋಡ್ ಸಕ್ರಿಯಗೊಳಿಸಿ , ಚಾರ್ಜ್ ಉಳಿಸಿ.