Published
1 year agoon
By
Akkare Newsಕೆಎಸ್ ಆರ್ ಟಿಸಿ (KSRTC)ಸೇರಿ ನಾಲ್ಕು ನಿಗಮದ ನೌಕರರಿಗೆ ರಾಜ್ಯ ಸರ್ಕಾರ ಖುಷಿಯ ಸುದ್ದಿ ನೀಡಿದೆ. ತುಟ್ಟಿಭತ್ಯೆ ಹೆಚ್ಚಳ ಮಾಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರದ ಆದೇಶದ ಅನುಸಾರ ಬೆಂಗಳೂರು 21.10.2023 ರಲ್ಲಿ ಸರ್ಕಾರಿ ನೌಕರರಿಗೆ (KSRTC workers ) ದಿನಾಂಕ 01.07.2023 ರಿಂದ ಅನ್ವಯವಾಗುವ ಹಾಗೆ ತುಟ್ಟಿಭತ್ಯೆ ದರವನ್ನು ಶೇ.35 ರಿಂದ ಶೇ.38.75 ಕ್ಕೆ ಹೆಚ್ಚಳ ಆದೇಶ ನೀಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ನಿಗಮದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜುಲೈ-2023 ರಿಂದ ಅಕ್ಟೋಬರ್-2023 ರವರೆಗಿನ ತುಟ್ಟಿಭತ್ಯೆ ಹಿಂಬಾಕಿ ಪಾವತಿಯ ಕುರಿತು ಪ್ರತ್ಯೇಕವಾಗಿ ಆದೇಶ ನೀಡಲಾಗುತ್ತದೆ. ನಾಲ್ಕೂ ಸಾರಿಗೆ ನಿಗಮಗಳಲ್ಲಿ ನವಂಬರ್-2023 ರ ತಿಂಗಳ ವೇತನದಲ್ಲಿ ಮತ್ತು ಮುಂದಕ್ಕೆ ತುಟ್ಟಿಭತ್ಯೆ ದರವನ್ನು ಅನುಷ್ಠಾನ ಮಾಡಲಾಗಿದೆ. 86.35 ರಿಂದ .38.75 ಕೈ ಹೆಚ್ಚಳ ಮಾಡಲಾಗಿದೆ