Connect with us

ಇತ್ತೀಚಿನ ಸುದ್ದಿಗಳು

ಸಣ್ಣ ನೀರಾವರಿ ಇಲಾಖೆಯಿಂದ 17 ತಡೆಗೋಡೆ ಕಾಮಗಾರಿಗೆ 8.50 ಕೋಟಿ ಅನುದಾನ‌ ಮಂಜೂರು: ಶಾಸಕ ಅಶೋಕ್ ರೈ

Published

on

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 17 ಕಡೆಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ 8.50 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ನದಿ,ಹಾಗೂ ತೋಡಿನ ಬದಿಗಳಲ್ಲಿ ಅಪಾಯಕಾರಿ ಸನ್ನಿವೇಶ ಇರುವ ಕಡೆಗಳಿಗೆ ಈ ಅನುದಾನ ಬಿಡುಗಡೆಯಾಗಿದೆ. ಸಣ್ಣ ನೀರಾವರಿ ಇಲಾಖೆಯ ಮೂಲಕ ಸರಕಾರ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮಂಜೂರು ಮಾಡಲಾಗಿದೆ.

ಅನುದಾನ ಬಿಡುಗಡೆಯಾದ ಕಾಮಗಾರಿಗಳು:
ಪುತ್ತೂರು ತಾಲ್ಲೂಕಿನ ಹಿರೇಬಂಡಾಡಿ ಗ್ರಾಮ ಕೆಮ್ಮಾರ ಮುಹಿಯುದ್ದೀನ್ ಜುಮಾ ಮಸೀದಿ ಪಕ್ಕದಲ್ಲಿ ತೋಡಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 90 ಲಕ್ಷ,2

ಪುತ್ತೂರು ತಾಲ್ಲೂಕಿನ ಕೆದಂಬಾಡಿ ಗ್ರಾಮದ ಮೊಂಟಿಮೂಲೆಯಿಂದ ಗುತ್ತು ಕಾಲುದಾರಿಯ ತೋಡಿನ ಎರಡು ಬದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ 75 ಲಕ್ಷ,

ನೆಟ್ಟಣಿಗೆ ಮುಡೂರು ಗ್ರಾಮದ ಪಳ್ಳತ್ತೂರು ರಕ್ಷಕರ ಚೆಕ್‌ ಪೋಸ್ಟ್ ಪ್ರಯಾಣಿಕರ ತುಂಗುದಾಣ ಇತರೆ ಕಟ್ಟಡದ ಹಿಂಬದಿ ತೋಡಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 40 ಲಕ್ಷ,

ಬೆಟ್ಟಂಪಾಡಿ ಗ್ರಾಮದ ಬಾರ್ತಕಮೇರು ಎಂಬಲ್ಲಿ ತೋಡಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 60.00 ಲಕ್ಷ,

ಪುತ್ತೂರು ತಾಲ್ಲೂಕಿನ ಚಿಕ್ಕಮುನ್ನೂರು ಗ್ರಾಮದ ಬೆದ್ರಾಳ ಎಂಬಲ್ಲಿ ತೋಡಿನ ಬದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 60.00 ಲಕ್ಷ,

ಕೊಡಿಪ್ಪಾಡಿ ಗ್ರಾಮದ ಬಟ್ರಪಾಡಿ ಎಂಬಲ್ಲಿ ಇಬ್ರಾಹಿಂರವರ ಮನೆ ಸಮೀಪ ತೋಡಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ 65.00 ಲಕ್ಷ,

ಕೊಳ್ಳಿಗೆ ಗ್ರಾಮದ ಬಿರ್ಮುಕಜೆ ಎಂಬಲ್ಲಿ ತೋಡಿನ ಬದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ 20 .00 ಲಕ್ಷ,

ಕೊಳಿಗೆ ಗ್ರಾಮದ ಕಟ್ಟಪುಣಿ ಎಂಬಲ್ಲಿ ತೋಡಿನ ಬದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ 50.00 ಲಕ್ಷ,

ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ, ಸೇತುವೆ ಬಳಿ ಹೊಳೆ ಬದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ 60.00 ಲಕ್ಷ,

ಬಂಟ್ವಾಳ ತಾಲ್ಲೂಕಿನ ಕೇಪು ಗ್ರಾಮದ ಅಡ್ಯನಡ್ಕ ಮರಕ್ಕಿಣಿ ಎಂಬಲ್ಲಿ ತೋಡಿನ ಬದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 20.00 ಲಕ್ಷ

ಕಬಕ ಗ್ರಾಮದ ಸುರೇಶ್ ರವರ ಮನೆ ಬಳಿ ತಡೆಗೋಡೆ ನಿರ್ಮಾಣ ಕಾಮಗಾರಿ 20 .00 ಲಕ್ಷ,

ಬಂಟ್ವಾಳ ತಾಲ್ಲೂಕಿನ ವಿಟ್ಲ ಕಸಬಾ ಗ್ರಾಮದ ನೆತ್ತರಕೆರೆ ಎಂಬಲ್ಲಿ ತೋಡಿನ ಬದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ.30.00 ಲಕ್ಷ,

ಬಂಟ್ವಾಳ ತಾಲ್ಲೂಕಿನ ಬಿಳಿಯೂರು ಗ್ರಾಮದ ವಿಷ್ಣಮೂರ್ತಿ ದೇವಸ್ತಾನ ರಸ್ತೆಯಬದಿಯತೋಡಿಗೆತಡೆಗೋಡೆನಿರ್ಮಾಣಕಾಮಗಾರಿ.15.00 ಲಕ್ಷ,

ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಶೇಖಮಲೆ ದಲಿತ ಕಾಲೋನಿಯಕುರಿಕ್ಕಾರ-ಪಯಂದೂರು ಎಂಬಲ್ಲಿ ತೋಡಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 85 .00 ಲಕ್ಷ,

ಬಂಟ್ವಾಳ ತಾಲ್ಲೂಕಿನ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುಂದರಿ ಕ ಮಾಮೇಶ್ವರ ಇವರ ಮನೆ ಬಳಿ ತೋಡಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 30.00 ಲಕ್ಷ,

ಒಳಮೊಗ್ರು ಗ್ರಾಮದ ಚಿಲ್ಮತ್ತಾರು ಎಂಬಲ್ಲಿ ತೋಡಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 90.00 ಲಕ್ಷ,

ಪುತ್ತೂರು ತಾಲ್ಲೂಕಿನ ಕೊಳಿಗೆ ಗ್ರಾಮದ ಅಮ್ಮಿನಡ್ಕ ಮತ್ತು ನೆಟ್ಟಾರು ಮಧ್ಯ ಪೆರ್ಲಂಪಾಡಿ ಗ್ರಾಮ ಪಂಚಾಯತ್ ಎದುರು ರಸ್ತೆಯ ಬದಿ ತೋಡಿನ ಬದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 40.00 ಲಕ್ಷ ಅನುದಾನ ಬಿಡುಗಡೆಯಾಗಿದೆ.


ಮಳೆಗಾಲದಲ್ಲಿ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುವ ಕೆಲವೊಂದು ನದಿ,ಹಾಗೂ ತೋಡುಗಳು ಇರುವಲ್ಲಿಗೆ ಅನುದಾನದ ಅಗತ್ಯತೆ ಇದ್ದು ಈ ಬಗ್ಗೆ ಸರಕಾರದ ಗಮನ ಸೆಳೆದಿದ್ದೆ.‌ಸರಕಾರವು ಸಣ್ಣ ನೀರಾವರಿ ಇಕಾಖೆಯ ಮೂಲಕ 8.50 ಕೋಟಿ ಅನುದಾನ ಮಂಜೂರು ಮಾಡಿದೆ. ಸರಕಾರಕ್ಕೆ ಅಭಿನಂದನೆಗಳು

ಅಶೋಕ್ ರೈ, ಶಾಸಕರು ಪುತ್ತೂರು

 

Continue Reading
Click to comment

Leave a Reply

Your email address will not be published. Required fields are marked *

Advertisement