ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಶಾಲೆಯಲ್ಲಿ ಮಾತ್ರವಲ್ಲ ಮನೆಯಲ್ಲೂ ಗುಣಮಟ್ಡದ ಶಿಕ್ಷಣ ಮಕ್ಕಳಿಗೆ ಸಿಗಬೇಕಿದೆ: ಅಶೋಕ್ ರೈ

Published

on

 

ಪುತ್ತೂರು: ಶಾಲೆಯಲ್ಲಿ ಎಲ್ಲವನ್ನೂ ಕಲಿಸುವುದಿಲ್ಲ ಒಬ್ಬ ವ್ಯಕ್ತಿಗೆ ಬೇಕಾದ 40% ವಿದ್ಯೆ ಮಾತ್ರ ಶಾಲೆಯಲ್ಲಿ ದೊರೆಯುತ್ತದೆ ಉಳಿದ ಶಿಕ್ಷಣ ಮನೆಯಲ್ಲಿ ಸಿಗುತ್ತದೆ ಅದು ಕೂಡಾ ಗುಣಮಟ್ಟದಿಂದ ಕೂಡಿರಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಬಪ್ಪಳಿಗೆ ಅಂಬಿಕಾ ವಿದ್ಯಾಲಯದಲ್ಲಿ ನಡೆದ ಪ್ರತಿಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪುತ್ತೂರಿನಲ್ಲಿ ಉತ್ತಮ ಶಿಕ್ಷಣ ಸಂಸಸ್ಥೆಗಳು‌ಅನೇಕ ಇದ್ದು ಅಂಬಿಕಾ ಸಂಸ್ಥೆಯೂ ಅದರಲ್ಲಿ‌ಸೇರಿಕೊಂಡಿದೆ ಎಂದು ಹೇಳಿದರು.‌ ಫೀಸ್ ಕಟ್ಟಿ ಪಡೆಯುವ ಶಿಕ್ಷಣ ಮಾತ್ರ ಮಕ್ಕಳಿಗೆ ಸಾಲದು ಮಕ್ಕಳಿಗೆ ಮಾನವೀಯತೆ, ಪ್ರೀತಿ ಯ ಶಿಕ್ಣಣ ಮನೆಯಲ್ಲೇ ಕೊಡಬೇಕು ಇಲ್ಲವಾದರೆ ನಿಮ್ಮ ವಾರ್ದಕ್ಯದಲ್ಲಿ ಹಾಸ್ಟೆಲ್ ನಲ್ಲಿ‌ಮಲಗಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಹೇಳಿದರು.

ಉನ್ನತ ಶಿಕ್ಷಣದ‌ಕನಸು ಕಾಣಬೇಕು ,‌ಕನಸು ನನಸು‌ಮಾಡಲೂ ಪ್ರಯತ್ನ ಅತೀ ಅಗತ್ಯವಾಗಿದೆ ಎಂದು ಹೇಳಿದರು.ಕೇವಲ‌ಇಂಜಿನಿಯರ್ , ಡಾಕ್ಟರ್ ಕಡೆ ಗಮನಕೊಡಬೇಡಿ ಐಎಎಸ್ ಐಪಿಎಸ್ ಪರೀಕ್ಷೆಗಳಲ್ಲಿ ಕುಳಿತುಕೊಳ್ಳುವ ಮೂಲಕ ಸರಕಾರಿ ಉದ್ಯೋಗದಲ್ಲಿ ಸೇರಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು

Continue Reading
Click to comment

Leave a Reply

Your email address will not be published. Required fields are marked *

Advertisement