Published
1 year agoon
By
Akkare Newsಪುತ್ತೂರು: ಲವ್ ಜಿಹಾದ್ ನಿಂದ ಧರ್ಮ ತೊರೆಯುವ ಯುವತಿಯರು ತಮ್ಮ ಭವಿಷ್ಯದ ಕುರಿತು ಗಂಭೀರ ಚಿಂತನೆ ಮಾಡಬೇಕು ಎಂದು ಚಲನಚಿತ್ರ ನಟಿ ಮಾಳವಿಕಾ ಅವಿನಾಶ್ ಮಹಿಳೆಯರಿಗೆ ಕರೆ ನೀಡಿದರು. ಮಹಿಳಾ ಸಮನ್ವಯ ಪುತ್ತೂರು ಜಿಲ್ಲೆ ಮತ್ತು ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಸಹಯೋಗದಲ್ಲಿ ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ‘ನಾರೀ ಶಕ್ತಿ ಸಂಗಮ’ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿವಿಧ ಆಸೆ, ಆಮಿಷಗಳಿಗೊಳಗಾಗಿ ಲವ್ ಜಿಹಾದ್ ಮೂಲಕ ಯುವತಿಯರು ತಮ್ಮ ಧರ್ಮವನ್ನು ತೊರೆದು ಅನ್ಯ ಧರ್ಮದ ಕಟ್ಟುಪಾಡಿಗೊಳಗಾಗುವ ಮೊದಲು ತಮ್ಮ ಭವಿಷ್ಯದ ಬಗ್ಗೆ ಗಂಭೀರ ಚಿಂತನೆಯನ್ನು ಮಾಡಬೇಕು, ಅನ್ಯ ಧರ್ಮೀಯರನ್ನು ವಿವಾಹವಾಗುವ ಹಿಂದೂ ಯುವತಿ ತನ್ನ ಸಮಾನ ಹಕ್ಕುಗಳಿಂದ ವಂಚಿತಳಾಗುತ್ತಾಳೆ, ಮಹಿಳೆಯರು ಪ್ರಜ್ಞಾವಂತಿಕೆಯನ್ನು ಹೆಚ್ಚಿಸಿಕೊಳ್ಳ ಬೇಕು ಎಂದು ಹೇಳಿದರು.