Published
1 year agoon
By
Akkare Newsಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಹಂತಗಳಲ್ಲಿ ಒಟ್ಟು 220 ಕಾಮಗಾರಿಗೆ ಶಿಲಾನ್ಯಾಸ ನಡೆಯಲಿದ್ದು ಎಲ್ಲಾ ಕಾಮಗಾರಿಗೂ ರಾಜ್ಯ ಕಾಂಗ್ರೆಸ್ ಸರಕಾರದ್ದೇ ಅನುದಾನವಾಗಿದ್ದು, ಕೆಲವರು ಹಿಂದಿನ ಸರಕಾರದ ಅನುದನ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಇಡ್ಕಿದು ಗ್ರಾಮದ ಮಿತ್ತೂರು ಗಾಣದ ಕೊಟ್ಯ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು
ಪುತ್ತೂರು ತಾಲೂಕಿನಲ್ಲಿ ಗ್ರಾಮೀಣ ರಸ್ತೆಗಳು ತೀರಾ ಹದಗೆಟ್ಟಿದ್ದು ಬಹುತೇಕ ಕಡೆಗಳಲ್ಲಿ ರಸ್ತೆ ಹೊಂಡಗಳಿಂದ ತುಂಬಿ ಸಂಚಾರಕ್ಕೂ ಅಯೋಗ್ಯವಾಗಿದೆ. ಗ್ರಾಮಸ್ಥರು ರಸ್ತೆಗಾಗಿ ಅನೇಕ ವರ್ಷಗಳಿಂದ ಬೇಡಿಕೆ ಇಟ್ಟಿದ್ದರೂ ರಸ್ತೆ ಕಾಮಗಾರಿ ಮಾತ್ರ ನಡೆದಿಲ್ಲ. ಮಿತ್ತೂರಿನ ಗಾಣದ ಕೊಟ್ಯ ರಸ್ತೆಗೆ ರೂ.25 ಲಕ್ಷ ಅನುದಾನ ಮಂಜೂರಾಗಿದ್ದು ಸುಮಾರು 220 ಮೀಟರ್ ರಸ್ತೆಗೆ ಕಾಂಕ್ರೀಟ್ ಆಗಲಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಈ ರಸ್ತೆಗೆ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ ಶಾಸಕರು ಚುನಾವಣಾ ಸಂದರ್ಭದಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸುವುದು ನನ್ನ ಕರ್ತವ್ಯ ಎಂದು ಭಾವಿಸಿ ನಾನು ಗ್ರಾಮೀಣ ರಸ್ತೆಗಳಿಗೆ ಹೆಚ್ಚಿನ ಒತ್ತು ಕೊಡುವುದಾಗಿ ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.
ವಲಯಾಧ್ಯಕ್ಷರಾದ ನಾಸಿರ್ ಕೋಲ್ಪೆ, ಬೂತ್ ಅಧ್ಯಕ್ಷರಾದ ಲಕ್ಷಣ್ ಕುಲಾಲ್, ಹಂಝ ಕಂದಕ್, ಅಬ್ದುಲ್ ಲತೀಫ್ ದಲ್ಕಾಜೆ ಕೋಲ್ಪೆ, ಗ್ರಾಪಂ ಪಿಡಿಒ ಗೋಖುಲ್ ದಾಸ್ ಭಕ್ತ, ಸಾದಿಕ್ ಅಕ್ಕರೆ, ಸಾಜಿದ್ ಮಿತ್ತೂರು, ಕೇಶವ ಭಟ್, ಅದ್ರಮಾ ಜಾಜಿ, ವಸಂತ ಮತ್ತಿತರರು ಉಪಸ್ತಿತರಿದ್ದರು.