Published
1 year agoon
By
Akkare Newsಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ಭಾವ ಉದ್ಯಮಿಯಾಗಿದ್ದ ಮಹದೇವಯ್ಯ ಅವರು ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ಮೂರು ದಿನದ ನಂತರ ಇದೀಗ, ಚಾಮರಾಜನಗರದ ಕಾಡಿನಲ್ಲಿ ಮೂಟೆ ಯೊಂದರಲ್ಲಿ ಅವರ ಶವ ಪತ್ತೆಯಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಆಗಿರೋ ಮಹದೇವಯ್ಯ ಅವರನ್ನು ಕೊಲೆ ಮಾಡಲು ಸುಫಾರಿ ನೀಡಲಾಗಿತ್ತೆ? ಜಮೀನು ವಿಚಾರಕ್ಕೆ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಅವರನ್ನು ಸುಪಾರಿ ಕಿಲ್ಲರ್ಸ್ಗಳು ಕಿಡ್ನಾಪ್ ಮಾಡಿಕೊಂಡು ಹೋಗಿ ಹತ್ಯೆ ಮಾಡಿ ಕಾಡಿನಲ್ಲಿ ಮೂಟೆಯೊಳಗೆ ಶವವನ್ನು ತುಂಬಿಸಿ ಎಸೆದಿರುವ ಅನುಮಾನ ವ್ಯಕ್ತವಾಗಿದೆ.
ಇನ್ನು ಮಹದೇವಯ್ಯ ಅವರ ಕಾರಿನಲ್ಲಿಯೇ ಕಿಡ್ನಾಪ್ ಮಾಡಿಕೊಂಡು ಕರೆದೊಯ್ದು ಕೊಲೆ ಮಾಡಿ ಮೂಟೆಯಲ್ಲಿ ಅವರ ಶವವನ್ನು ತುಂಬಿಸಿ ಕಾಡಿನಲ್ಲಿ ಎಸೆದು ಹೋಗಿದ್ದಾರೆ. ಚಾಮರಾಜನಗರದ ಹನೂರಿನ ರಾಮಾಪುರದ ಕಾಡಿನ ಬಳಿ ಮಹದೇವಯ್ಯ ಅವರ ಕಾರು ಪತ್ತೆಯಾಗಿದ್ದು, ಸುತ್ತಲಿನ ಕಾಡಿನಲ್ಲಿ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸಿದ ಸಂದರ್ಭ ಕಾರ್ಯ ಮೂಟೆಯಲ್ಲಿ ಶವ ಪತ್ತೆಯಾಗಿರುವುದ್ದು, ಅದರಲ್ಲಿ ಮಹದೇವಯ್ಯ ಅವರ ಶವ ಇರುವ ವಿಚಾರ ಬೆಳಕಿಗೆ ಬಂದಿದೆ.ಸುಪಾರಿ ಕಿಲ್ಲರ್ಸ್ಗಳು ಕಿಡ್ನಾಪ್ ಮಾಡಿ ಅವರನ್ನು ಕೊಲೆ ಮಾಡಿ ಚಾಮರಾಜನಗರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾರೆ ಎಂಬ ಅನುಮಾನ ಭುಗಿಲೆದ್ದಿದೆ.
ಡಿ.1 ಶುಕ್ರವಾರ ತಡರಾತ್ರಿ ಮಹದೇವಯ್ಯ ನಾಪತ್ತೆಯಾಗಿದ್ದರು. ಮಾಜಿ ಸಚಿವ ಸಿಪಿವೈ ಬಾವ ಮಹದೇವಯ್ಯ ನಾಪತ್ತೆ ಪ್ರಕರಣದಲ್ಲಿ ಚಾಮರಾಜನಗರದ ಬಳಿ ಯೋಗೇಶ್ವರ ಅವರ ಭಾವ ಮಹದೇವಯ್ಯ ಕಾರು ಪತ್ತೆಯಾಗಿತ್ತು. ಅದರ ನಂತರ ಹನೂರು ತಾಲೂಕಿನ ರಾಮಾಪುರದ ಬಳಿ ರಾತ್ರಿ ಬ್ರಿಜ್ಜಾ ಕಾರು ಪತ್ತೆಯಾಗಿತ್ತು. ಅವರ ಕಾರಿನಲ್ಲಿ ರಕ್ತದ ಕಲೆ ಕಂಡುಬಂದಿದೆ. ಬೆರಳಚ್ಚು ತಜ್ಞರು, ಎಫ್ಎಸ್ಎಲ್ ಟೀಂ ನಿಂದ ಕಾರು ಪರಿಶೀಲನೆ ನಡೆಸಿದಾಗ ಕೊಲೆಯಾಗಿರುವ ವಿಚಾರ ಮುನ್ನಲೆಗೆ ಬಂದಿದೆ.
ಉದ್ಯಮಿ ಮಹದೇವಯ್ಯ ಅವರು ಬಿಡದಿ, ಬೆಂಗಳೂರು, ಚನ್ನಪಟ್ಟಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದ ಮಹಾದೇವಯ್ಯ ಅವರು ಕೆಲ ಜಮೀನು ವಿಚಾರವಾಗಿ ಕೋರ್ಟ್ ಗೆ ಹೋಗಿದ್ದರಂತೆ. ಕೋಟ್ಯಾಂತರ ಮೌಲ್ಯದ ಜಮೀನು ಕೈ ಜರುವ ಭಯದಲ್ಲಿ ಕೆಲವು ಕಿಡಿಗೇಡಿಗಳು ಮಹದೇವಯ್ಯ ಅವರ ಕೊಲೆ ಮಾಡಿರುವ ಅನುಮಾನ ಗಾಡವಾಗಿ ಕಾಡುತ್ತಿದೆ. ಇದರ ಜೊತೆಗೆ ಮಹದೇವಯ್ಯ ಅವರ ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿದಾಗ ಚಾಮರಾಜನಗರಕ್ಕೆ ಹೋದ ಪೊಲೀಸರಿಗೆ ಅಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಈಗ ಶವ ಪತ್ತೆಯಾಗಿದ್ದು, ಕೊಲೆ ಮಾಡಿರುವುದು ಖಾತ್ರಿಯಾಗಿದೆ ಎನ್ನಲಾಗಿದೆ. ಸದ್ಯ ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.