Published
1 year agoon
By
Akkare Newsಪುತ್ತೂರು : ಕಡಬ ಹಾಗೂ ಪುತ್ತೂರು ತಾಲೂಕಿನಾದ್ಯಂತ ಡಿ.5 ರಿಂದ 12ರ ತನಕ ಅನಿರ್ದಿಷ್ಟಾವಧಿ ಕಾಲ ಕೆಂಪು ಕಲ್ಲು ಸಾಗಾಟದ ಬಂದ್ ಆಗಲಿದೆ
ಲಾರಿ ಬಿಡಿ ಭಾಗಗಳಿಗೆ ಮತ್ತು ಡೀಸೆಲ್ ಬೆಲೆ ಏರಿಕೆ ಕಡಿಮೆಯಾಗದೇ ಇರುವುದು, ಕೆಂಪು ಕಲ್ಲು ಸಾಗಾಟದಲ್ಲಿ ಬ್ರೋಕರ್ ಗಳ ಹಾವಳಿ ಹಾಗೂ ಕೆಂಪು ಕಲ್ಲು ಸಾಗಾಟ ಮಾಡಿ ತೀರಾ ಕಡಿಮೆ ದರದಲ್ಲಿ ಇಳಿಸುವುದು ಕಂಡುಬಂದಿದೆ
ಇದರಿಂದಾಗಿ ಎಲ್ಲಾ ಕೆಂಪು ಕಲ್ಲು ಸಾಗಾಟದ ಲಾರಿಯವರು ಬಹಳ ತೊಂದರೆ ಅನುಭವಿಸುತ್ತಿರುವುದರಿಂದ ಅನಿರ್ಧಿಷ್ಟಾವಧಿ ಕಾಲ ಬಂದ್ ಗೆ ಕರೆ ನೀಡಿರುತ್ತೇವೆ ಎಲ್ಲಾ ಲಾರಿ ಮಾಲಕರು ಚಾಲಕರು ಸಹಕಾರ ನೀಡಬೇಕಾಗಿ ಪುತ್ತೂರು ಜೈ ಭಾರತ್ ಲಾರಿ ಮಾಲಕರ ಚಾಲಕರ ಸಂಘ ಅಧ್ಯಕ್ಷರಾದ ಧನ್ಯಕುಮಾರ್ ಬೆಳಂದೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.