Published
1 year agoon
By
Akkare Newsವಿಟ್ಲ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರ ತಂಡ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಕೇಳಲು ಹೋದ ತಾಯಿ ಮತ್ತು ಪತ್ನಿಗೆ ಹಲ್ಲೆ ನಡೆಸಲು ಮುಂದಾಗಿ, ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ಇಬ್ಬರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಬೈದುಲ್ಲಾ (35) ಎಂಬವರು ಹಲ್ಲೆಗೊಳಗಾದ ವ್ಯಕ್ತಿ. ಉಬೈದುಲ್ಲ ಅವರು ಕೊಳ್ಳಾಡು ಗ್ರಾಮದ ಸಾಲೆತ್ತೂರು ಮೈದಾನದ ಬಳಿ ತನ್ನ ಸಂಬಂದಿಕರೊಂದಿಗೆ ಹೋದಾಗ, ಅಲ್ಲಿದ್ದ ಆರೋಪಿಗಳಾದ ಅಬ್ದುಲ್ ಖಾದರ್ ಮತ್ತು ಬಶೀರ್ ಎಂಬವರು ಹಳೆ ದ್ವೇಷದಿಂದ ಉಬೈದುಲ್ಲ ಅವರ ಕಾಲರ್ ಪಟ್ಟಿಯನ್ನು ಹಿಡಿದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ.
ಆರೋಪಿಗಳಾದ ಅಬ್ದುಲ್ ಖಾದರ್ ಮತ್ತು ಬಶೀರ್ ರವರಲ್ಲಿ, ತನ್ನ ಮಗನಿಗೆ ಯಾಕೆ ಬೈದು ಹಲ್ಲೆ ಮಾಡಿದ್ದು ಎಂದು ಉಬೈದುಲ್ಲಾ ರವರ ತಾಯಿ ಕೇಳಿದಕ್ಕೆ ಆರೋಪಿ ಬಶೀರನು ಉಬೈದುಲ್ಲ ತಾಯಿಯನ್ನುದ್ದೇಶಿಸಿ ಅವ್ಯಾಚವಾಗಿ ಬೈದು, ನಿನ್ನ ಮಗನನ್ನು ಕೊಲ್ಲುತ್ತೇವೆ ಎಂದು ಹೇಳಿ ಹೊಡೆಯಲು ಬಂದಿದ್ದು, ಈ ವೇಳೆ ಉಬೈದುಲ್ಲಾ ಆತನ ಪತ್ನಿ ತಾಯಿಗೆ ಹೊಡೆಯುವುದನ್ನು ತಡೆಯಲು ಹೋದಾಗ, ಬಶೀರ್ ನು ಉಬೈದುಲ್ಲಾ ಹೆಂಡತಿಯೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾನೆ. ಹಾಕಿರುತ್ತಾನೆ ಎಂದು ದೂರಲಾಗಿದೆ. ಹಲ್ಲೆಯಿಂದ ಗಾಯಗೊಂಡ ಉಬೈದುಲ್ಲಾ ಅವರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 200/2023 0 504, 323, 354, 506 0/3 34 3 ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.