Published
1 year agoon
By
Akkare Newsಪಂಚರಾಜ್ಯ ಚುನಾವಣಾ ಫಲಿತಾಂಶ ಇಡೀ ದೇಶಾದ್ಯಂತ ಭಾರೀ ಎಫೆಕ್ಟ್ ನೀಡಿದೆ. ಮೋದಿ ಅಲೆ ಮತ್ತೆ ಅಪ್ಪಳಿಸಲು ರೆಡಿಯಾಗಿದ್ದು ಹಲವರಲ್ಲಿ ನಡುಕ ಶುರುಮಾಡಿದೆ. ಇದು ಎಷ್ಟು ಭೀಕರವಾಗಿದೆ ಎಂದರೆ ‘ಇಂಡಿಯಾ’ (I.N.D.I.A) ಮೈತ್ರಿ ಕೂಟದ ಮಿತ್ರಪಕ್ಷಗಳಲ್ಲೇ ಭಯ ಶುರುವಾಗಿ, ಮೈತ್ರಿಯಿಂದ ದೂರ ವುಳಿಯುವಂತೆ ಮಾಡಿದೆ.
ಹೌದು, ಇದಕ್ಕೆ ಸಾಕ್ಷಿ ಎಂಬಂತೆ ನಾಳೆ ಈ ಇಂಡಿಯಾ ಕೂಟದ ಸಭೆ ಕರೆಯಲಾಗಿದ್ದು, ಒಕ್ಕೂಟದ ಮೀಟಿಂಗ್‌ಗೆ ಬರಲ್ಲ ಎಂದ ಪ್ರಮುಖ ಪಕ್ಷಗಳ ನಾಯಕರೇ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಳೆ ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಅಂದ ಹಾಗೆ ಪಂಚರಾಜ್ಯ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಕಾಕಿ ತಮ್ಮ ಮೈತ್ರಿ ಪಕ್ಷಗಳ ಸಭೆ ಕರೆದಿದ್ದರು. ಆದರೆ ಇಂಡಿಯಾ ಕೂಟದ ರಚನೆಕಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಇಬ್ಬರೂ ಸಭೆಗೆ ಗೈರಾಗಲು ಪ್ಲ್ಯಾನ್ ಮಾಡಿದ್ದರು. ಜತೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಾವು ಕೂಡ ಭಾಗವಹಿಸುವುದಿಲ್ಲ ಎಂದು ಸೋಮವಾರವೇ ಹೇಳಿದ್ದರು. ಇಷ್ಟೇ ಅಲ್ಲದೆ ನಾಳೆ ಸಭೆ ನಡೆದಿದ್ದರೆ, ನಿತೀಶ್ ಕುಮಾರ್ ಮತ್ತು ಅಖಿಲೇಶ್ ಯಾದವ್ ತಮ್ಮ ಬದಲಿಗೆ ಬೇರೆ ನಾಯಕರನ್ನು I.N.D.I.A ಒಕ್ಕೂಟದ ಸಭೆಗೆ ಕಳಿಸುವ ಪ್ಲ್ಯಾನ್ ಮಾಡಿದ್ದರು. ಮೂವರು ಮುಖ್ಯ ನಾಯಕರೇ, ಸೂತ್ರದಾರರೇ ಸಭೆಗೆ ಬರುವುದಿಲ್ಲ ಎಂದಾದರೆ ಸಭೆ ನಡೆರುವುದು ಹೇಗೆ ಹೇಳಿ?! ಹೀಗಾಗಿ ಸಭೆ ಮುಂದಾಡಲಾಗಿದೆ.
ಇವರು ಸಭೆಗೆ ಬರದಿರಲು ಏನೇ ಕಾರಣ ನೀಡಲಿ ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ಮೂಲಕ ಕಾರಣ ಪಂಚರಾಜ್ಯ ಚುನಾವಣೆಯ ಎಫೆಕ್ಟ್ ಎಂದು ಬಣ್ಣಿಸಲಾಗುತ್ತಿದೆ. ಮೋದಿ ನೀಡಿದ ಹೊಡೆತ, ಶಾಕ್ ಅಷ್ಟು ಭಯಂಕರವಾಗಿತ್ತಾ ಎಂದು ಎಲ್ಲರೂ ಅಚ್ಚರಿ ಪಡುತ್ತಿದ್ದಾರೆ.