Published
1 year agoon
By
Akkare Newsಬೆಳಗಾವಿ: ರಾಜ್ಯ ಸರ್ಕಾರದ ವತಿಯಿಂದ ಬೇರೆ ಬೇರೆ ಇಲಾಖೆಗಳ ಅಡಿಯಲ್ಲಿ ನೀಡಲಾಗುತ್ತಿರುವ ಸ್ಕಾಲರ್ ಶಿಪ್ ಅನ್ನು ಒಂದೇ ಸೆಂಟ್ರಲೈಸ್ಡ್ ಪೂಲ್ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ ಕಲಾಪದ ವೇಳೆ ಪ್ರಶ್ನೋತ್ತರ ಅವಧಿಯಲ್ಲಿ ಎಲ್ಲಾ ಸ್ಕಾಲರ್ ಶಿಪ್ ಗಳನ್ನು ಒಂದೇ ಸೆಂಟ್ರಲೈಸ್ಡ್ ಪೂಲ್ ಮಾಡುವುದಕ್ಕೆ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಒಂದೇ ಕೇಂದ್ರಿತ ವ್ಯವಸ್ಥೆ ಅಡಿಯಲ್ಲಿ ಎಲ್ಲ ಸ್ಕಾಲರ್ ಶಿಪ್ ವ್ಯವಸ್ಥೆಯನ್ನು ತೆಗೆದುಕೊಂಡು ಬಂದು ಸ್ಕಾಲರ್ ಶಿಪ್ ಪಡೆಯುವುದನ್ನು ಸರಳೀಕರಣ ಮಾಡಿ ಎಂದು ಮಂಜುನಾಥ ಭಂಡಾರಿ ಸದನದಲ್ಲಿ ಒತ್ತಾಯಿಸಿದ್ದಾರೆ.
ಮಂಜುನಾಥ ಭಂಡಾರಿ ಪ್ರಶ್ನೆಗೆ ಉತ್ತರಿಸಿದ ಮೇಲ್ಮನೆ ಸಭಾ ನಾಯಕ ಮತ್ತು ಸಚಿವ ಬೋಸ ರಾಜು, ಏಕ ಶಿಷ್ಯ ವೇತನ ವ್ಯವಸ್ಥೆ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು ಸ್ಟೇಟ್ ಸ್ಕಾಲರ್ ಶಿಪ್ ಪೋರ್ಟಲ್ ಮೂಲಕ ಮಾಡಲು ಆದೇಶ ಮಾಡಲಾಗಿದೆ ಎಂದು ಹೇಳಿದ್ದಾರೆ.