ಎರಡು ತಿಂಗಳ ಹಿಂದೆ ಪುತ್ತೂರಿನಲ್ಲಿ ಕಲಿಯುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣದ ಆರೋಪಿಗೆ ಪುತ್ತೂರು ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಕಡಬದ ಯಜ್ಞೇಶ್ ಎಂಬಾತನೇ ಜಾಮೀನು ಮಂಜೂರು ಪಡೆದ ಆರೋಪಿ.
ಸಂತ್ರಸ್ತ ಯುವತಿಯನ್ನು ಆರೋಪಿ ಪುತ್ತೂರಿನ ಬೊಳ್ವಾರ್‌ನಿಂದ ಅಪಹರಿಸಿ ಮಡಿಕೇರಿಯ ಅತ್ತೆ ಮನೆಗೆ ಎರಡು ತಿಂಗಳ ಹಿಂದೆ ಪುತ್ತೂರಿನಲ್ಲಿ ಕಲಿಯುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣದ ಆರೋಪಿಗೆ ಪುತ್ತೂರು ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಕಡಬದ ಯಜ್ಞೇಶ್ ಎಂಬಾತನೇ ಜಾಮೀನು ಮಂಜೂರು ಪಡೆದ ಆರೋಪಿ.
ಪ್ರಕರಣದ ಹಿನ್ನಲೆ: ಅ.10 ರಂದು ಸಂತ್ರಸ್ತೆ ಮನೆಯಿಂದ ಹೊರಡುವಾಗ ಬೊಳುವಾರಿನ ತನ್ನ ಗೆಳತಿಯ ಮನೆಗೆ ಹೋಗಿ ವಾಪಾಸು ಬರುವುದಾಗಿ ತಿಳಿಸಿ ಕಾಲೇಜಿಗೆ ಹೋಗಿದ್ದಾಳೆ. ಆದರೆ ಬಾಲಕಿ ಅನಂತರ ಮನೆಗೆ ಫೋನ್ ಮಾಡದೆ ಇರುವುದನ್ನು ಕಂಡು ಆಕೆಯ ಮನೆಯವರು ಆಕೆಯ ಸ್ನೇಹಿತೆಯಲ್ಲಿ ವಿಚಾರಿಸಿದಾಗ ಆಕೆ ಸ್ನೇಹಿತೆಯ ಮನೆಗೆ ಹೋಗದೆ ಇರುವುದು ಗೊತ್ತಾಗಿದೆ.
ಅನಂತರ ಕಾಲೇಜಿನಲ್ಲಿ ವಿಚಾರಿಸಿದಾಗ ಆಕೆ ಮಧ್ಯಾಹ್ನದವರೆಗೆ ಕಾಲೇಜಿಗೆ ಬಂದಿದ್ದು, ಅನಂತರ ಬಂದಿಲ್ಲ ಎಂದು ಗೊತ್ತಾಗುತ್ತದೆ. ಈ ಕುರಿತು ಅಪ್ರಾಪ್ತ ಬಾಲಕಿಯ ತಂದೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.