Published
1 year agoon
By
Akkare Newsನಗರ ಸಭೆಯ ಎರಡು ವಾರ್ಡ್ ಗಳ ಉಪ -ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಕುರಿತು ಕಾರ್ಯತಂತ್ರ ರೂಪಿಸುವರೇ ನಗರ ಕಾಂಗ್ರೆಸ್ ವತಿಯಿಂದ ವಾರ್ಡ್ 1, ಹಾಗೂ 11 ರ ಕಾರ್ಯಕರ್ತರ ಹಾಗೂ ಮುಖಂಡರುಗಳ ಸಭೆ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು,
ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿಯವರು ನಗರ ಸಭೆಯ ಎರಡು ವಾರ್ಡ್ ಗಳಿಗೆ ಚುನಾವಣೆ ಘೋಷಣೆ ಆಗಿದೆ, ಈ ಎರಡು ವಾರ್ಡ್ ಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲೇ ಬೇಕು, ವಿದ್ಯಾವಂತರು ಮತ್ತು ಪ್ರಜ್ಞಾವಂತರು ಹೆಚ್ಚು ಇರುವ ವಾರ್ಡ್ ಇದಾಗಿರುತ್ತದೆ. ಆದುದರಿಂದ ಯಾವುದೇ ಕಳಂಕವಿಲ್ಲದ, ಜನ ಸಾಮಾನ್ಯರೊಂದಿಗೆ ಬೆರೆಯುವ ಹಾಗೂ ಅದರಲ್ಲೂ ಜನರು ಒಪ್ಪುವಂತ ಒಳ್ಳೆಯ ಕಾರ್ಯಕರ್ತರನ್ನು ನಾವು ಅಭ್ಯರ್ಥಿ ಯಾಗಿ ನಿಲ್ಲಿಸಬೇಕಾಗುತ್ತದೆ. ಉಪ. ಚುನಾವಣೆಗಳು ಬೇರೆ ಚುನಾವಣೆ ತರ ಅಲ್ಲ,ಈ ಚುನಾವಣೆಯಲ್ಲಿ ಕಾರ್ಯಕರ್ತರು ತುಂಬಾ ಕೆಲಸ ಮಾಡಬೇಕಾಗುತ್ತದೆಎಂದು ಹೇಳಿದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಯವರು ಮಾತನಾಡಿ ವಾರ್ಡ್ ಅಭ್ಯರ್ಥಿ ಆಕಾಂಕ್ಷಿಗಳು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಅರ್ಜಿ ಸಲ್ಲಿಸಬೇಕು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಲಾಗುವುದು,ಶಾಸಕರಲ್ಲಿ ಸಮಾಲೋಚನೆ ಮಾಡಿ ಯೋಗ್ಯ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಾಗುವುದುಎಂದು ಹೇಳಿದರು
ಸಭೆಯನ್ನು ಉದ್ದೇಶಿಸಿ, ಕೆಪಿಸಿಸಿ ಸದಸ್ಯ ಪ್ರಸಾದ್ ಕೌಶಲ್ ಶೆಟ್ಟಿ, ಕೆಪಿಸಿಸಿ ವಕ್ತಾರ ಅಮಳರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ವಲೇರಿಯನ್ ಡಯಾಸ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್ ಮಾತನಾಡಿದರು,
ಸಭೆಯಲ್ಲಿ ಯಂಗ್ ಬ್ರಿಗೇಡ್ ಜಿಲ್ಹಾ ಅಧ್ಯಕ್ಷ ರಂಜಿತ್ ಬಂಗೇರ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಷನ್ ರೈ ಬನ್ನೂರು,ನಗರ ಸಭಾ ಸದಸ್ಯ ರೋಬಿನ್ ತಾವ್ರೊ,ನಗರ ಕಾಂಗ್ರೆಸ್ ಪದಾಧಿಕಾರಿಗಳಾದ ಮುಕೇಶ್ ಕೆಮ್ಮಿ0ಜೆ, ರಶೀದ್ ಮುರ, ದಿನೇಶ್ ಕೆ ಸೇವಿರೆ, ಸೈಮನ್ ಗೊನ್ಸಲ್ವಿಸ್ ಕೃಷ್ಣನಗರ,,ಕಾಂಗ್ರೆಸ್ ಮುಖಂಡರುಗಳಾದ ಇಸ್ಮಾಯಿಲ್ ಸಾಲ್ಮರ ಕಲಾವಿದ ಕೃಷ್ಣಪ್ಪ, ನವೀನ್ ನಾಯ್ಕ್ ನೆಹರುನಗರ, ಬೂತ್ ಅಧ್ಯಕ್ಷರುಗಳಾದ ರೋಹಿತ್ ನೆಲ್ಲಿಕಟ್ಟೆ, ಅಲ್ಫೋನ್ಸ್, ಎ ಪಿ ಎಂ ಸಿ ರಸ್ತೆ, ಬೆಳಿಯಪ್ಪ ಪೂಜಾರಿ ಸೂತ್ರಬೆಟ್ಟು, ಸುದೇಶ್ ಕೊಂಬೆಟ್ಟು ಹಾಗೂ ದೇವಿ ಪ್ರಸಾದ್ ನೆಲ್ಲಿಕಟ್ಟೆ, ಶಶಿಕಾಂತ್ ನೆಲ್ಲಿಕಟ್ಟೆ, ಬಾಲಕೃಷ್ಣ ನಾಯ್ಕ್ ನೆಲ್ಲಿಕಟ್ಟೆ, ನವೀನ್ ಗೌಡ ಸೇವಿರೆ, ಶಬ್ಬೀರ್ ಸೇವಿರೆ, ಹರಿಪ್ರಸಾದ್ ಸೇವಿರೆ, ಕುಮಾರ ಶಿವನಗರ ಮೊದಲಾದವರು ಉಪಸ್ಥಿತರಿದ್ದರು. ನಗರ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ದಾಮೋದರ ಭಂಡಾರ್ಕರ್ ಸ್ವಾಗತಿಸಿ, ಉಪಾಧ್ಯಕ್ಷ ದಿನೇಶ ಕಾಮತ್ ಸಾಮೆತಡ್ಕ ವಂದಿಸಿದರು.