Published
1 year agoon
By
Akkare Newsಇತ್ತೀಚೆಗೆ ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಗಮನದಲ್ಲಿರಿಸಿಕೊಂಡು ಈಗ ನಡೆಯುತ್ತಿರುವ ಅಧಿವೇಶನದಲ್ಲಿಯೇ ವಕೀಲರ ರಕ್ಷಣಾ ಕಾಯಿದೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ಮನವಿ ಪತ್ರವನ್ನು ವಿವೇಕ್ ಸುಬ್ಬಾರೆಡ್ಡಿ ಅಧ್ಯಕ್ಷರು ಬೆಂಗಳೂರು ವಕೀಲರ ಸಂಘ ಮತ್ತು ಹಿರಿಯ ವಕೀಲರು ಉಚ್ಚನ್ಯಾಯಾಲಯ, ಕರ್ನಾಟಕ ಇವರ ನೇತೃತ್ವದಲ್ಲಿ ಸಲ್ಲಿಸಲಾಯಿತು.
ಈ ಸಮಯದಲ್ಲಿ ಮಾನ್ಯ ಶಾಸಕರು ಹಾಗೂ ವಕೀಲ ಮಿತ್ರರಾದ ಶ್ರೀ ಪೊನ್ನಣ್ಣ, ಬಾರ್ ಕೌನ್ಸಿಲ್ ಛೇರ್ಮನ್ ಶ್ರೀ ವಿಶಾಲ್ ರಘು, ಬೆಂಗಳೂರು ವಕೀಲರ ಸಂಘದ ಖಜಾಂಚಿಗಳಾದ ಶ್ರೀ ಹರೀಶ್ ಎಂ ಟಿ, ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಇತರ ವಕೀಲರು ಉಪಸ್ಥಿತರಿದ್ದರು.