ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕಾನೂನು

ಕಾಂಗ್ರೆಸ್ ಕಾರ್ಯಕರ್ತನಿಗೆ ಹಲ್ಲೆ ಪ್ರಕರಣ. ಆಸ್ಪತ್ರೆಗೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದ ಶಾಸಕ ಅಶೋಕ್ ಕುಮಾರ್ ರೈ

Published

on

ಕಡಬ : ಚಾರ್ವಾಕದಲ್ಲಿ ಹಲ್ಲೆಗೊಳಗಾಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನನ್ನು ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಾರೆ.ಮಾದ್ಯಮದೊಂದಿಗೆ ಮಾತನಾಡಿದ ಶಾಸಕ ರೈ ಅವರು ಘಟನೆ ಪಕ್ಷ ಪಕ್ಷದೊಳಗೆ ನಡೆದಿದೆಯೇ, ವೈಯಕ್ತಿಕವಾಗಿ ನಡೆದಿದೆಯೋ ಗೊತ್ತಿಲ್ಲ, ಯಾವುದೇ ಸತ್ಯಾಸತ್ಯತೆ ತಿಳಿಯದೆ ಮಾತನಾಡುವುದು ಸರಿಯಲ್ಲ ,ಪೊಲೀಸರ ತನಿಖೆಯ ಬಳಿಕ ಸಂಪೂರ್ಣ ಸತ್ಯ ಹೊರಬರಲಿದೆ ಎಂದು ಹೇಳಿದ್ದಾರೆ.

ಯಾವುದೇ ಸಮಯದಲ್ಲಿ ಪಕ್ಷ ಪಕ್ಷಕ್ಕಾಗಿ ನಾವು ಇಂತಹ ಕೆಲಸ ಮಾಡಬಾರದು. ಕಾರ್ಯಕರ್ತರು ನಾಯಕರ ಮಾತನ್ನು ಕೇಳಿಕೊಂಡು ಹೊಡೆದಾಡಿಕೊಳ್ಳಲು ಹೋಗಬಾರದು, ದೊಡ್ಡಮಟ್ಟದಲ್ಲಿ ನಾಯಕರೆಲ್ಲರೂ ಕೂಡ ಒಂದೇ, ತಳಮಟ್ಟದ ಕಾರ್ಯಕರ್ತರು ಈ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಎಂದು ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಡಿ.17ರಂದು ಮನೋಹರ್‌ ಮನೆಗೆ ನುಗ್ಗಿದ ಕೆಲವು ತಂಡ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು.ಯುವಕ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದ್ದು,ಹಲ್ಲೆ ಮಾಡಿದವರು ಬಿಜೆಪಿ ಬೆಂಬಲಿಗರು ಎಂದು ಹೇಳಲಾಗುತ್ತಿದೆ.


Continue Reading
Click to comment

Leave a Reply

Your email address will not be published. Required fields are marked *

Advertisement