ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕರ್ನಾಟಕ

ನಿಮಗೆ ಸರಕಾರಿ ನೌಕರಿ ಬೇಕಾ…. ಈ ಕೆಳಗಿನ ದಾಖಲೆಗಳು ಕಡ್ಡಾಯ !!!? ಸರಕಾರದ ಮಹತ್ವದ ಆದೇಶ.

Published

on

ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯಲು ಹೊಸ ನಿಯಮ ಜಾರಿಗೆ ತರಲಾಗಿದೆ. ಹೌದು, ರಾಜ್ಯ ಸರ್ಕಾರಿ ಹುದ್ದೆಗಳ (Government Job) ಭರ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು (Government of Karnataka) ឥដ ಬದಲಾವಣೆ ಮಾಡಿದ್ದು, ಇನ್ಮುಂದೆ ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯಲು ಎಸ್ ಎಸ್ ಎಲ್ ಸಿ (SSLC) ಕಡ್ಡಾಯ ಮಾಡಲಾಗಿದೆ. ಕರ್ನಾಟಕ ಸಿವಿಲ್ ಸೇವೆಗಳ ಕಾಯಿದೆ-1978ರಲ್ಲಿ ತಿದ್ದುಪಡಿಯೊಂದಿಗೆ ಜು.1 ರಂದು ರಾಜ್ಯ ಪತ್ರದಲ್ಲಿ ರಾಜ್ಯ ಸರ್ಕಾರವು ಕ್ಲಾರ್ಕ್, ಸೇರಿ ಯಾವುದೇ ಗ್ರೂಪ್ ಡಿ ಹುದ್ದೆಗಳ ನೇಮಕಾತಿಗೂ ಇನ್ಮುಂದೆ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ರಾಜ್ಯ ಸರ್ಕಾರ ಕಡ್ಡಾಯ ಎಂದು ಅಧಿಸೂಚನೆ ಹೊರಡಿಸಿದೆ.

ಅದಲ್ಲದೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಗ್ರೂಪ್ ಸಿ ಹುದ್ದೆಗಳ ನೇರ ನೇಮಕದ ಸಂದರ್ಶನವನ್ನೂ ರದ್ದುಪಡಿಸಲಾಗಿದ್ದು, ನೇಮಕಾತಿ ಖಾಯಂ ಅಥವಾ ಬಡ್ತಿಗೆ ಮಾನದಂಡವಾಗಿ ಐದು ವರ್ಷ ಪ್ರೊಬೆಷನರಿ ಅವಧಿಯನ್ನು ಪರಿಗಣಿಸುವ ನಿಯಮಾವಳಿಯಲ್ಲೂ ಬದಲಾವಣೆ ತರಲಾಗಿದೆ. ಗ್ರೂಪ್ ಡಿ ಸೇವೆ ಮತ್ತು ಮೇಲ್ಪಟ್ಟ ರಾಜ್ಯ ಸಿವಿಲ್ ಸೇವೆಗಳ ನೇಮಕಾತಿಗೆ ಎಸ್ ಎಸ್ ಎಲ್ ಸಿ ಗಿಂತ ಕಡಿಮೆ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.


Continue Reading
Click to comment

Leave a Reply

Your email address will not be published. Required fields are marked *

Advertisement