ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಮಂಗಳೂರು

ಕಲ್ಲಂಗಳ ಸರಕಾರಿ ಪ್ರೌಢ ಶಾಲಾ ವಾರ್ಷಿಕೋತ್ಸವ:ಶಾಲಾ ವಾರ್ಷಿಕೋತ್ಸವ ವಿದ್ಯಾರ್ಥಿಗಳ,ಪೋಷಕರ ಹಬ್ಬವಾಗಿದೆ: ಅಶೋಕ್ ಕುಮಾರ್

Published

on

ಪುತ್ತೂರು:ಶಾಲಾ ,ಕಾಲೇಜು ವಾರ್ಷಿಕೋತ್ಸವ‌ಮಕ್ಕಳ ಮತ್ತು ಪೋಷಕರ‌ಹಬ್ಬವಾಗಿದೆ. ಉದ್ಯಮಿಗಳ ಸಹಕಾರದಿಂದ ಸರಕಾರಿ ಶಾಲೆಗಳು ಅಭಿವೃದ್ದಿಯಾಗುತ್ತದೆ.ಸರಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಆದರೆ ಪೋಷಕರು ಖಾಸಗಿ ಶಾಲೆಯತ್ತ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದು ಇದಕ್ಕೆ ಸರಕಾರಿ ಶಾಲೆಯಲ್ಲಿ ಈ ಹಿಂದೆ ಗುಣಮಟ್ಟದ ಶಿಕ್ಷಣದ ಕೊರೆತೆಯಿಂದಾಗಿದೆ. ಭಾಷಾವಾರು ಶಿಕ್ಷಕರ ನೇಮಕ ನಡೆದಿದೆ. 1600 ಶಿಕ್ಷಕರ ನೇಮಕಾತಿ ನಡೆದಿದೆ. ಮಕ್ಕಳಿಗೆ ಎಲ್ ಕೆಜಿಯಿಂದ ಪಿಯುಸಿ ತನಕ ಗುಣಮಟ್ಡದ ಶಿಕ್ಷಣ ಕಡ್ಡಾಯವಾಗಿ ದೊರೆಯಬೇಕಿದೆ.
ಶಿಕ್ಷಕರು‌ಮತ್ತು ಪೋಷಕರು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಕಾರಣಕರ್ತರಾಗಿದ್ದು, ಗ್ರಾಮೀಣ ಮಕ್ಕಳು ಸಂಸ್ಕಾರದಲ್ಲಿ‌ಮುಂದೆ ಇದ್ದಾರೆ ಎಂದು ಶಾಸಕರು ಹೇಳಿದರು.


ಚಿಕ್ಕ ಕಾರಣಕ್ಕೆ ಡೈವೊರ್ಸು ನಡೆಯುತ್ತಿದೆ
ಇಂದು ಎಲ್ಲರಿಗೂ ವಿದ್ಯೆ ಇದೆ ಆದರೆ ಸಂಸ್ಕಾರ ದ ಕೊರತೆ ಇದೆ. ಚಿಕ್ಕ ಕಾರಣಕ್ಕೂ ದಾಂಪತ್ಯದಲ್ಲಿ ಒಡಕು ಉಂಟಾಗುತ್ತಿದೆ ಹೀಗಾಗದಂತೆ ಮಕ್ಕಳಿಗೆ ಸಣ್ಣ ಪ್ರಾಯದಲ್ಲೇ ಸಂಸ್ಕಾರ ಕಲಿಸಬೇಕು‌ಎಂದು‌ಶಾಸಕರು ಹೇಳಿದರು.

ವೃದ್ದಾಶ್ರಮಗಳು ಹೆಚ್ಚುತ್ತಿರುವುದು ಆತಂಕದ ಸಂಗತಿ
ವಿದ್ಯೆ ಹೆಚ್ಚಾದಂತೆ ಆಶ್ರಮಗಳ ಸಂಖ್ಯೆ ಅಧಿಕವಾಗುತ್ತದೆ. ಹೆತ್ತವರನ್ನಹ ಆಶ್ರಮಕ್ಕೆ ಸೇರಿಸುವ ಮಕ್ಕಳ ಸಂಖ್ಯೆ ವೃದ್ದಿಯಾಗುತ್ತಿರುವುದು ಆತಂಕದ ವಿಚಾರವಾಗಿದೆ ಎಂದು ಶಾಸಕರು ಹೇಳಿದರು.


ಸನ್ಮಾನ
ದೇವದಾಸ ರೈ ಕೇಪು, ಶ್ರೀನಿವಾಸ ರೈ ಕುಂಡಕ್ಕೋಡಿ, ರಾಧಾಕೃಷ್ಣ ಪೈ ಅಡ್ಯನಡ್ಕರವರಿಗೆ ಸನ್ಮಾನ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಪರುಷೋತ್ತಗೌಡ, ವಿಶಾಲಾಕ್ಷಿ, ಮೋಹಿನಿ, ಜಗಜೀವನ್ ರಾಂ ಶೆಟ್ಟಿ, ಉದ್ಯಮಿ ಸತೀಶ್ ರೈ ಕಲ್ಲಂಗಳ, ಕೃಷ್ಣಯ್ಯ, ಪ್ರಕಾಶ್ ರೈ ಕಲ್ಲಂಗಳ ,ಗಿರಿಜಾ, ಮುಖ್ಯ ಶಿಕ್ಣಕಿ ಮಾಲತಿ,ಕಾಂಗ್ರೆಸ್ ವಲಯಾಧ್ಯಕ್ಷಬಾಲಕೃಷ್ಣ ಶೆಟ್ಟಿ,ಅಬ್ದುಲ್ ಕರೀಂ,ಬಾಲಚಂದ್ರ ಕಟ್ಟೆ, ಬಾಲಕೃಷ್ಣ ಕಾರಂತ್, ಪ್ರಭಾಕರ ಶೆಟ್ಟಿ ದಂಬೆಕಾನ, ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ ಉಪಸ್ಥಿತರಿದ್ದರು.
ಶಿಕ್ಷಕ ರಮೇಶ ದಲ್ಕಜೆ ಕಾರ್ಯಕ್ರಮ‌ನಿರೂಪಿಸಿ, ಲಕ್ಷಣ ನಾಯ್ಕ್ ವಂದಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement