Published
12 months agoon
By
Akkare Newsಪುತ್ತೂರು: ತಾನು ಕಲಿತ ಶಾಲೆಗೆ ತೆರಳಿ ಅಲ್ಲಿ ತಾನು ಕುಳಿತುಕೊಂಡಿದ್ದ ತರಗತಿಗೆ ಭೇಟಿ ನೀಡಿ ತನ್ನ ಬಾಲ್ಯದ ವಿದ್ಯಾರ್ಥಿ ಜೀವನವನ್ನು ಶಾಸಕರು ಮೆಲುಕು ಹಾಕಿಕೊಂಡರು.ಪುತ್ತೂರಿನ ಕೊಂಬೆಟ್ಟು ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಶಾಸಕರಾದ ಅಶೋಕ್ ರೈ ಯವರು ಪ್ರೌಢ ಶಾಲಾ ಶಿಕ್ಷಣವನ್ನು ಇಲ್ಲಿ ವ್ಯಾಸಂಗ ಮಾಡಿದ್ದರು.
ತಾನುಕುಳಿತುಕೊಂಡಿದ್ದ ಅದೇ ತರಗತಿಗೆ ಭೇಟಿ ನೀಡಿ ತಾನು ಕುಳಿತು ಪಾಠ ಕೇಳುತ್ತಿದ್ದ ಅದೇ ಜಾಗದಲ್ಲಿ ಕುಳಿತು ತನ್ನ ಹೈಸ್ಕೂಲ್ ಜೀವನವನ್ನು ಮೆಲುಕು ಹಾಕಿದರು. ಇದೇ ವೇಳೆ ಶಾಲೆಯ ಉಪ ಪ್ರಾಂಶುಪಾಲರು ಶಾಸಕರ ಹೈಸ್ಕೂಲ್ ಸಮಯದ ಉದೃತ ಭಾಗದ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು.