Published
12 months agoon
By
Akkare Newsದಕ್ಷಿಣ ಕನ್ನಡ: KSRTC ಬಸ್‌ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ 75 ವರ್ಷ ಪ್ರಾಯದ ವ್ಯಕ್ತಿಯೋರ್ವನನ್ನು ಮಾರ್ಗ ಮಧ್ಯದಲ್ಲಿ ಇಳಿಸಿದ ಅಮಾನವೀಯ ಘಟನೆಯೊಂದು ಕಡಬ ತಾಲೂಕಿನ ನೂಜಿಬಾಳ್ತಿಲದಲ್ಲಿ ನಡೆದಿದೆ.ಈ ಘಟನೆ ಜ.6 ರಂದು ನಡೆದಿದೆ.
ಕಲ್ಲುಗುಡ್ಡೆಯಿಂದ ಉಪ್ಪಿನಂಗಡಿಗೆ ಸಂಚರಿಸುವ ಬಸ್‌ನಲ್ಲಿ ಶಾಂತಿಗುರಿ ನಿವಾಸಿ ಬಾಬು ಗೌಡರು ಕಾಂಚನಕ್ಕೆ ತೆರಳಲು ಹತ್ತಿದ್ದಾರೆ. ಟಿಕೆಟ್ ನೀಡುವಾಗ ಅವರ ಬಳಿ 200 ರೂ. ನೋಟು ನೀಡಿದ್ದರು. ಆದರೆ ನಿರ್ವಾಹಕ ಬಾಬು ಗೌಡರನ್ನು ಗೋಳಿಯಡ್ಕ ಎಂಬಲ್ಲಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಇಳಿಸಿ ಅಗೌರವ ತೋರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಚಿಲ್ಲರೆ ಆಗುವಾಗ ಚಿಲ್ಲರೆ ನೀಡಿ ಎಂದು ಬಾಬು ಅವರು ತಿಳಿಸಿದ್ದರೂ ಕೂಡಾ ನಿರ್ವಾಹಕ ಸ್ಪಂದಿಸದೆ ವ್ಯಕ್ತಿಯನ್ನು ಮಾರ್ಗಮಧ್ಯೆ ಇಳಿಸಿದ್ದಾರೆ.ಈ ಕುರಿತು ಬಾಬು ಅವರು ಬೇಸರ ವ್ಯಕ್ತಪಡಿಸಿದ್ದು, ಈ ರೀತಿ ನಡೆಸಿರುವುದು ಸರಿಯೇ ಎಂಬ ಪ್ರಶ್ನೆ ಮಾಡಿದ್ದಾರೆ.