Published
12 months agoon
By
Akkare Newsಲೋಕಸಭಾ ಚುನಾವಣೆ- ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ !!ಮುಂಬರುವ ಲೋಕಸಭಾ ಚುನಾವಣೆಯ ಕಾವು ಇದೀಗ ದೇಶಾದ್ಯಂತ ರಂಗೇರಿದೆ. ಇದರ ನಡುವೆಯೇ ಅಭ್ಯರ್ಥಿಗಳ ಆಯ್ಕೆ ಕೂಡ ನಡೆಯುತ್ತಿದ್ದು, ಲಾಭಿಗಳು ಕೂಡ ಜೋರಾಗಿದೆ. ಇದರೆಡೆಯಲ್ಲಿ ರಾಜ್ಯದಲ್ಲಿ ಬಿಜೆಪಿ 25ಕ್ಕೂ ಹೆಚ್ಟು ಸ್ಥಾನಗಳನ್ನು ಗೆಲ್ಲುವ ಪಣತೊಟ್ಟಿದೆ. ಸದ್ಯ ಇದೀಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಸಂಭವನೀಯ ಪಟ್ಟಿ ಇಲ್ಲಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಬಿಜೆಪಿ(BJP) ಲೋಕಸಭಾ ಚುನಾವಣೆಯ ಗೆಲುವು ಅತೀ ಮುಖ್ಯವಾಗಿದೆ. ದೇಶದಲ್ಲಿ ಮೋದಿ ಅಲೆ ಇದ್ದರೂ ರಾಜ್ಯ ಬಿಜೆಪಿಯ ಒಳ ಜಗಳ ಈ ಚುನಾವಣೆಯಲ್ಲಿ ಬಾರೀ ದೊಡ್ಡ ಹೊಡೆತ ನೀಡಬಹುದು. ಹೀಗಾ ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ದವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮುಂಬರುವ ಲೋಕಸಭೆ ಚುನಾವಣಾ ತಯಾರಿಯನ್ನ ಚುರುಕುಗೊಳಿಸಿದ್ದಾರೆ. ಬಿಜೆಪಿಯಲ್ಲಿ ಹಿರಿಯ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಹಲವು ಹಿರಿಯವ ಮುಖಂಡರನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಲೋಕಸಭಾ ಚುನಾವಣಾ ತಯಾರಿ ಕುರಿತು ಗುರುವಾರ ಬಿಜೆಪಿ ಹಿರಿಯ ಮುಖಂಡರೆಲ್ಲರೂ ಸಭೆ ನಡೆಸಿದ್ದಾರೆ. ಈ ನಡುವೆ ಬಿಜೆಪಿ ಅಭ್ಯರ್ಥಿಗಳ ಸಂಭವೀನಯ ಪಟ್ಟಿ ವೈರಲ್ ಆಗುತ್ತಿದೆ.
2024ರ ಲೋಕಸಭಾ ಬಿಜೆಪಿ ಅಭ್ಯರ್ಥಿಗಳ ಸಂಬವನೀಯ ಪಟ್ಟಿ:
• ಮೈಸೂರು: ಪ್ರತಾಪ್ ಸಿಂಹ ಅಥವಾ ಯದುವೀರ್ ಒಡೆಯರ್
• ಚಾಮರಾಜನಗರ: ಶ್ರೀನಿವಾಸ್ ಪ್ರಸಾದ್ ಅಳಿಯ ಡಾ. ಮೋಹನ್, ಕೊಳ್ಳಗಾಲ ಎನ್ ಮಹೇಶ್
• ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ
• ದಾವಣಗೆರೆ: ಜಿ ಎಂ ಸಿದ್ದೇಶ್ವರ್
• ಶಿವಮೊಗ್ಗ: ಬಿ ವೈ ರಾಘವೇಂದ್ರ
• ಹಾವೇರಿ: ಬಸವರಾಜ ಬೊಮ್ಮಾಯಿ, ಕೆ ಎಸ್ ಈಶ್ವರಪ್ಪ ಪುತ್ರ ಕಾಂತೇಶ್
• ಬೆಂಗಳೂರು ಕೇಂದ್ರ; ಪಿ ಸಿ ಮೋಹನ್
• ತುಮಕೂರು: ವಿ ಸೋಮಣ್ಣ
• ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ
• ಬೆಂಗಳೂರು ಉತ್ತರ : ಡಿ ವಿ ಸದಾನಂದಗೌಡ
• ಬೆಂಗಳೂರು ಗ್ರಾಮಾಂತರ: ಸಿ ಪಿ ಯೋಗೇಶ್ವರ್
• ವಿಜಯಪುರ: ರಮೇಶ್ ಜಿಗಜಿಣಗಿ
• ಕಲಬುರ್ಗಿ: ಉಮೇಶ್ ಜಾದವ್
• ಬೆಳಗಾವಿ: ಮಂಗಳ ಸುರೇಶ್, ರಮೇಶ ಕತ್ತಿ
• ಬೀದರ್: ಭಗವಂತ್ ಖೂಬಾ
• ಚಿಕ್ಕೋಡಿ: ಅಣ್ಣಾಸಾಹೇಬ ಜೊಲ್ಲೆ
• ರಾಯಚೂರು : ರಾಜಾ ಅಮರೇಶ್ವರ
• ಚಿಕ್ಕಬಳ್ಳಾಪುರ: ಡಾ. ಕೆ ಸುಧಾಕರ್, ಅಲೋಕ್ ವಿಶ್ವನಾಥ್, ಎಂಟಿಬಿ ಪುತ್ರ ನಿತೀನ್ ಪುರುಷತ್ತಮ್
• ಉತ್ತರ ಕನ್ನಡ: ಅನಂತ ಕುಮಾರ್ ಹೆಗ್ಡೆ, ವಿಶ್ವೇಶ್ವರ ಹೆಗಡೆ ಕಾಗೇರಿ
• ದಕ್ಷಿಣ ಕನ್ನಡ: ನಳಿನ್ ಕುಮಾರ್ ಕಟೀಲ್
• ಹುಬ್ಬಳ್ಳಿ-ಧಾರವಾಡ: ಪ್ರಹ್ಲಾದ್ ಜೋಶಿ
• ಚಿತ್ರದುರ್ಗ: ಎ ನಾರಾಯಣಸ್ವಾಮಿ
• ಬಾಗಲಕೋಟೆ: ಪಿ. ಸಿ. ಗದ್ದಿಗೌಡರ್
• ಬಳ್ಳಾರಿ: ಶ್ರೀರಾಮುಲು
• ಕೊಪ್ಪಳ: ಕರಡಿ ಸಂಗಣ್ಣ