ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ಇದರ ನೂತನ ಸಮಿತಿ ರಚನೆ, ಅಧ್ಯಕ್ಷರಾಗಿ ಮನ್ಸೂರ್ ಅಸ್ಲಮಿ, ಪ್ರ.ಕಾರ್ಯದರ್ಶಿಯಾಗಿ ಸಿದ್ದೀಕ್ ಸುಲ್ತಾನ್

Published

on

ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯದ ವಾರ್ಷಿಕ ಮಹಾಸಭೆ ಅಬ್ದುಲ್ ಕರೀಂ ದಾರಿಮಿ ಅಧ್ಯಕ್ಷತೆಯಲ್ಲಿ ಕುಂಬ್ರ ಕೆಐಸಿ ಸಭಾಂಗಣದಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ಯಾಸಿರ್ ಅರಾಫತ್ ಕೌಸರಿ ವರದಿ ಮಂಡಿಸಿದರು. ಚುನಾವಣಾಧಿಕಾರಿಯಾಗಿ ಅಕ್ಟರ್ ಕರಾವಳಿ ಸುಳ್ಯ ಭಾಗವಹಿಸಿದ್ದರು.

ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮನ್ಸೂರ್ ಅಸ್ಲಮಿ ಅಮ್ಮಿನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಕೋಶಾಧಿಕಾರಿಯಾಗಿ ಕೆ.ಎಚ್ ಮಹಮ್ಮದ್ ಕುಕ್ಕಾಜೆ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಇಬ್ರಾಹಿಂ ಹಾಜಿ ದರ್ಬೆ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಯಾಸಿರ್ ಅರಾಫತ್ ಕೌಸರಿ, ನಾಸಿರ್ ಫೈಝಿ, ಝನುದ್ದೀನ್ ಹಾಜಿ, ಕಾರ್ಯದರ್ಶಿಗಳಾಗಿ ಸಂಶುದ್ದೀನ್ ಇಂದುಮೂಲೆ, ಇಬ್ರಾಹಿಂ ಕೌಸರಿ ಹಾಗೂ ರಪೀಕ್ ಫೈಝಿ ಮಾಡನ್ನೂರು ಆಯ್ಕೆಯಾದರು.




qq
ವಿಖಾಯ ಚೇರ್‌ಮೆನ್ ಆಗಿ ಶಕೀಲ್ ಅಹ್ಮದ್ ತ್ಯಾಗರಾಜೆ, ಇಬಾದ್ ಚೇರ್‌ಮೆನ್ ಆಗಿ ಹನೀಫ್ ದಾರಿಮಿ ಇರ್ದೆ, ಸಹಚಾರಿ ಚೇರ್‌ಮೆನ್ ಆಗಿ ಯೂಸುಫ್ ಮಾಡನ್ನೂರು, ತ್ವಲಬಾ ಚೇರ್‌ಮೆನ್ ಆಗಿ ಇಸ್ಮಾಯಿಲ್ ಫೈಝಿ, ಕ್ಯಾಂಥಸ್‌ ವಿಂಗ್‌ ಚೇರ್‌ಮೆನ್ ಆಗಿ ಅಶ್ರಫ್ ಮಾಡಾವು, ಸರ್ಗಾಲಯ ಚೇರ್‌ಮೆನ್ ಆಗಿ ನೌಫಲ್ ಅಜ್ಜಿಕಲ್ಲು, ಟ್ರೆಂಡ್ ಚೇರ್‌ಮೆನ್ ಆಗಿ ಲತೀಫ್ ಕೊರಿಂಗಿಲ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಸ್ರಫ್ ಸಾರೆಪುಣಿ, ಹನೀಫ್ ಪೋಸೋಟಿಮಾರ್, ಸಲಾಂ ಮೇನಾಲ, ಬಶೀರ್ ಗಟ್ಟಮನೆ ಆಯ್ಕೆಗೊಂಡರು.ಯಾಸಿರ್ ಅರಾಫತ್ ಸ್ವಾಗತಿಸಿದರು. ಸಿದ್ದೀಕ್ ಸುಲ್ತಾನ್ ವಂದಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement