ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕರ್ನಾಟಕ

ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ತೀವ್ರ ಪೈಪೋಟಿ; ಲೋಕಸಭಾ ಅಖಾಡದಲ್ಲಿ ಮುಂಚೂಣಿಯಲ್ಲಿ ಯುಟಿ ಖಾದರ್‌ ಹೆಸರು

Published

on

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ವಿಧಾನಸಭೆ ಸ್ಪೀಕರ್ ಯುಟಿ ಖಾದರ್‌ (UT Khader) ಹೆಸರು ಮುನ್ನಲೆಗೆ ಬಂದಿದೆ. ಹಿಂದುತ್ವದ ಭದ್ರಕೋಟೆಯಲ್ಲಿ ಯುಟಿ ಖಾದರ್‌ಗೆ ಟಿಕೆಟ್‌ ನೀಡಲು ಕೆಪಿಸಿಸಿ (KPCC) ಯಲ್ಲಿ ಭಾರೀ ಚರ್ಚೆ ನಡೆದಿದೆ ಎನ್ನಲಾಗಿದೆ.

ಮುಸ್ಲಿಂ ಮತಗಳನ್ನು ಯುಟಿ ಖಾದರ್‌ ಅವರು ಪಡೆದುಕೊಳ್ಳುವ ಹೆಚ್ಚಿನ ಚಾನ್ಸಸ್‌ ಜೊತೆಗೆ ಹಿಂದೂ ಮತಗಳನ್ನು ಪಡೆಯುವ ಸಾಮರ್ಥ್ಯ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಭೂತ ಕೋಲದಲ್ಲಿ ಭಾಗವಹಿಸುವಿಕೆ, ಹಿಂದೂಗಳ ಸಮಾರಂಭಗಳಲ್ಲಿ ಭಾಗವಹಿಸುವಿಕೆ ಹೀಗೆ ಖಾದರ್‌ ಅವರು ಕ್ಷೇತ್ರದ ಹಿಂದುಗಳ ಮನ ಗೆದ್ದಿರುವುದು ಇವೆಲ್ಲಾ ಗಮನಾರ್ಹ.





ಖಾದರ್‌ ಅವರ ಜಾತ್ಯತೀತ ನಡೆಯಿಂದ ಎಲ್ಲಾ ರೀತಿಯ ಓಟ್‌ ಬ್ಯಾಂಕ್‌ ಸಿಗುವ ದೊಡ್ಡ ಪ್ಲಸ್‌ ಪಾಯಿಂಟ್‌ ಇರುವುದರಿಂದ ಜೊತೆಗೆ ಉತ್ತಮವಾಗಿ ಕೆಲಸ ಮಾಡಿದ್ದು, ಜನಾಭಿಪ್ರಾಯವು ಒಳ್ಳೆಯದಿರುವುದರಿಂದ ಕರಾವಳಿ ಪ್ರದೇಶದಲ್ಲಿ ಮತ್ತೆ ತಮ್ಮ ಪ್ರಾಬಲ್ಯ ಹೆಚ್ಚಿಸಲು, ಹಿಡಿತ ಸಾಧಿಸಲು ಕಾಂಗ್ರೆಸ್‌ ಲೆಕ್ಕಾಚಾರ ಹಾಕಿದೆ ಎನ್ನಲಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement