ಇತ್ತೀಚಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ಪ್ರಕಟಣೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ
ಕಾಂಗ್ರೆಸ್ ತೊರೆದ ಒಂದು ದಿನದ ನಂತರ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಆದರ್ಶ್ ಹೌಸಿಂಗ್ ಹಗರಣದ ಪ್ರಮುಖ ಆರೋಪಿ ಎಂದು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಅಶೋಕ್ ಚವಾಣ್ ಬಿಜೆಪಿಗೆ ಸೇರ್ಪಡೆ.Published
10 months agoon
By
Akkare Newsಕಾಂಗ್ರೆಸ್ ತೊರೆದ ಒಂದು ದಿನದ ನಂತರ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಆದರ್ಶ್ ಹೌಸಿಂಗ್ ಹಗರಣದ ಪ್ರಮುಖ ಆರೋಪಿ ಎಂದು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಅಶೋಕ್ ಚವಾಣ್ (Ashok Chavan) ಅವರು ಮಂಗಳವಾರ ಮುಂಬೈನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಆದರ್ಶ್ ಹೌಸಿಂಗ್ ಸೊಸೈಟಿಯು ಮುಂಬೈನ ಕೊಲಾಬಾದಲ್ಲಿ ನಿರ್ಮಿಸಲಾದ 31 ಅಂತಸ್ತಿನ ಅಪಾರ್ಟೆಂಟ್ ಸಂಕೀರ್ಣವಾಗಿದೆ. ಕಟ್ಟಡವು 1999 ರ ಕಾರ್ಗಿಲ್ ಯುದ್ಧದ ಯುದ್ದ ವೀರರು ಮತ್ತು ಯುದ್ಧ ವಿಧವೆಯರಿಗಾಗಿ ನಿರ್ಮಿಸಲಾಗಿತ್ತು. ಸಂಕೀರ್ಣದ ನಿವಾಸಿಗಳು ಕಾರ್ಗಿಲ್ ಯುದ್ಧದೊಂದಿಗೆ ಯಾವುದೇ ಸಂಬಂಧವಿಲ್ಲದ ಅಧಿಕಾರಿಗಳು ಮತ್ತು ರಾಜಕಾರಣಿಗಳ ಸಂಬಂಧಿಕರಿಗೆ ನೀಡಲಾಗಿತ್ತು. ಇದರಲ್ಲಿ ಚೌಹಾಣ್ ಅವರ ಅತ್ತೆಗೂ ಮನೆ ನೀಡಲಾಗಿತ್ತು. ಈ ಹಗರಣವನ್ನು 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಭಾಷಣದ ಪ್ರಮುಖ ವಸ್ತುವಾಗಿತ್ತು.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬವಾಂಕುಲೆ, ಬಿಜೆಪಿ ಮುಂಬೈ ಪಕ್ಷದ ಘಟಕದ ಮುಖ್ಯಸ್ಥ ಆಶಿಶ್ ಶೇಲಾರ್ ಮತ್ತು ಸಂಪುಟ ಸಚಿವ ಗಿರೀಶ್ ಮಹಾಜನ್ ಅವರ ಸಮ್ಮುಖದಲ್ಲಿ ಚವಾಣ್ (65ವ) ಅವರು ಬಿಜೆಪಿಗೆ ಸೇರ್ಪಡೆಯಾದರು.ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಚವಾಣ್. ಇಂದು ನನ್ನ ಹೊಸ ರಾಜಕೀಯ ಜೀವನ ಆರಂಭವಾಗಿದೆ. ಎಂದರು. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಂದ ಯಾವುದೇ ಕರೆಗಳು ಬಂದಿವೆಯೇ ಎಂಬ ಪ್ರಶ್ನೆಗೆ ಚವಾಣ್ ಉತ್ತರ ನೀಡದೆ ನುಣುಚಿಕೊಂಡರು.
ಮಾಜಿ ಸಿಎಂ ಎಸ್ ಬಿ ಚವಾಣ್ ಅವರ ಪುತ್ರ ಅಶೋಕ್ ಚವಾಣ್ ಅವರು ನಿನ್ನೆ ಕಾಂಗ್ರೆಸ್ ನಿಂದ ಹೊರಹೋಗುವ ಮುನ್ನ ಪ್ರತಿಕ್ರಿಯೆ ನೀಡಿ, ತಮ್ಮ ಆಯ್ಕೆ ಸ್ವತಂತ್ರವಾಗಿದೆ ಎಂದಷ್ಟೇ ಹೇಳಿ ಕಾಂಗ್ರೆಸ್ ತೊರೆಯಲು ನಿರ್ದಿಷ್ಟ ಕಾರಣಗಳನ್ನು ನೀಡಿರಲಿಲ್ಲ.ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕರಾದ ಬಾಬಾ ಸಿದ್ದಿಕ್ ಮತ್ತು ಮಿಲಿಂದ್ ದಿಯೋರಾ ಅವರು ಪಕ್ಷವನ್ನು ತೊರೆದ ಕೆಲವು ದಿನಗಳ ನಂತರ ಅಶೋಕ್ ಚವಾಣ್ ಕೂಡ ಕೈ ಪಕ್ಷ ತೊರೆದಿದ್ದಾರೆ.