Published
10 months agoon
By
Akkare Newsಕಾಣಿಯೂರು: ಶ್ರೀ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಸಂಸ್ಥಾನಂ ಉಡುಪಿಕಾಣಿಯೂರು ರಾಮತೀರ್ಥ ಮಠದ ಜಾತ್ರೋತ್ಸವವು ಫೆ 26ರಿಂದ ಮಾ 1ರವರೆಗೆ ನಡೆಯಲಿದ್ದು, ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಫೆ 14ರಂದು ಕಾಣಿಯೂರು ಶ್ರೀ ಮಠದಲ್ಲಿ ನಡೆಯಿತು.
ಪ್ರಾರಂಭವಾಗಿ ಕಾಣಿಯೂರು ಶ್ರೀ ಮಠದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಬಳಿಕ ಗೊನೆ ಕಡಿಯಲಾಯಿತು. ಈ ಸಂದರ್ಭದಲ್ಲಿ ಕಾಣಿಯೂರು ಮಠದ ವ್ಯವಸ್ಥಾಪಕರಾದ ನಿರಂಜನ್ ಆಚಾರ್, ಅರ್ಚಕರಾದ ಬಾಲಕೃಷ್ಣ ಅಸ್ರಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.