ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಧಾರ್ಮಿಕ ಪ್ರಕಟಣೆ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಕಾರಣಿಕ ಕ್ಷೇತ್ರ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ಹಾಗೂ ಉಗ್ರಾಣ ಮುಹೂರ್ತ, ಪಾಕಶಾಲೆ, ಕಾರ್ಯಾಲಯ ಉದ್ಘಾಟನೆPublished
10 months agoon
By
Akkare Newsಪುತ್ತೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಇಂದು ವೈಭವದ ಚಾಲನೆ ನೀಡಲಾಯಿತು.
ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಫೆ.16ರಂದು ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಪಾಕಶಾಲೆ ಉದ್ಘಾಟನೆ, ಕಾರ್ಯಾಲಯ ಉದ್ಘಾಟನೆ,ಗೊನೆ ಮುಹೂರ್ತ ನೆರವೇರಿತು.ಬೆಳಿಗ್ಗೆ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಅರ್ಚಕರಾದ ಶ್ರೀನಿವಾಸ್ ಹೆಬ್ಬಾರ್,ಪ್ರವೀಣ್ ಭಟ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.ಬಳಿಕ ಉಗ್ರಾಣ ಮುಹೂರ್ತದ ದೀಪ ಪ್ರಜ್ವಲನೆಯನ್ನು ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ಅರ್ಚಕ ಶ್ರೀನಿವಾಸ ಹೆಬ್ಬಾರ್ ಅವರು ನೆರವೇರಿಸಿದರು.ಮಾಜಿ ಪಟೇಲರು ಪಾಲ್ತಾಡು ಕುಟುಂಬದ ಯಜಮಾನ ನಾರಾಯಣ ರೈ ಪಾಲ್ತಾಡು ಉದ್ಘಾಟಿಸಿದರು.
ಪಾಕಶಾಲೆಯನ್ನು ಸುಬ್ರಹ್ಮಣ್ಯ ಪ್ರಸಾದ್ ಅರ್ನಾಡಿ ಉದ್ಘಾಟಿಸಿದರು.ಕಾರ್ಯಾಲಯವನ್ನು ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ವಿಲಾಸ್ ರೈ ಪಾಲ್ತಾಡು ಉದ್ಘಾಟಿಸಿದರು.ವಿನೋದ್ ರೈ ಪಾಲ್ತಾಡು ದೀಪ ಪ್ರಜ್ವಲಿಸಿದರು.ಭದ್ರತಾ ಕೋಶವನ್ನು ವೈದಿಕ ಸಮಿತಿ ಸಂಚಾಲಕ ಹರಿಕೃಷ್ಣ ಭಟ್ ಬರೆಮೇಲು ನೆರವೇರಿಸಿದರು.ಬಳಿಕ ಜಾತ್ರೋತ್ಸವಕ್ಕೆ ಗೊನೆಮುಹೂರ್ತ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕೇಸರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ನಳೀಲು, ಪ್ರಧಾನ ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ,ಕಾರ್ಯದರ್ಶಿ ಪ್ರವೀಣ್ ಕುಮಾರ್ ರೈ ನಳೀಲು,,ಉಪಾಧ್ಯಕ್ಷರಾದ ಕಿಶೋರ್ ಕುಮಾರ್ ರೈ ನಳೀಲು ನಾರಾಯಣ ರೈ ಮೊದೆಲ್ಕಾಡಿ, ಅಭಿವೃದ್ದಿ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ರೈ ನಳೀಲು, ಕೋಶಾಧಿಕಾರಿ ಮೋಹನ್ ದಾಸ್ ರೈ ನಳೀಲು,ಕಾರ್ಯಾಲಯ ಸಮಿತಿ ಸಂಚಾಲಕ ಸುರೇಶ್ ರೈ ವಿಟ್ಲ ಕೊಲ್ಯ,ಸಹ ಸಂಚಾಲಕ ಅಶಿತ್ ಶೆಟ್ಟಿ ಉಬರಡ್ಕ, ಸುಪ್ರಿತ್ ರೈ ನಳೀಲು,ಉಗ್ರಾಣ ಸಮಿತಿ ಸಂಚಾಲಕ ಜಗನ್ನಾಥ ರೈ ಮಣಿಕ್ಕರ,ಸಹ ಸಂಚಾಲಕರಾದ ಉಮೇಶ್ ನಾಯ್ಕ ಮರುವೇಲು,ರಮಾನಾಥ ಬೊಳಿಯಾಲ,ಗೋಪಾಲಕೃಷ್ಣ ಆಚಾರ್ಯ,ಹೊರೆಕಾಣಿಕೆ ಸಮಿತಿ ಸಂಚಾಲಕ ತಾರಾನಾಥ ಬೊಳಿಯಾಲ,ಕೊಳ್ತಿಗೆ ಗ್ರಾ.ಪಂ.ಸದಸ್ಯೆ ಶುಭಲತಾ ಜೆ. ರೈ ಮಣಿಕ್ಕರ,ವಿವಿಧ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ಭಾರ್ತಿಕುಮೇರು,ಹರೀಶ್ ನಾಯ್ಕ ಅಜೇಯನಗರ,ಸುಜಯ ನಾಯ್ಕ,ಪ್ರಚಾರ ಮತ್ತು ಮಾಧ್ಯಮ ಸಮಿತಿ ಸಂಚಾಲಕ ಸುಧಾಕರ ರೈ ಪಾಲ್ತಾಡಿ,ಸಹಸಂಚಾಲಕ ಪ್ರವೀಣ್ ಚೆನ್ನಾವರ,ಸಭಾ ಕಾರ್ಯಕ್ರಮ ಸಹಸಂಚಾಲಕ ಶಶಿ ಕುಮಾರ್ ಬಿ.ಎನ್., ಅಲಂಕಾರ ಸಮಿತಿಯ ಸಹ ಸಂಚಾಲಕ ಜಯರಾಮ ರೈ ಬರೆಮನೆ,ವಿವಿಧ ಸಮಿತಿ ಸದಸ್ಯರಾದ ವಿಖ್ಯಾತ್ ರೈ ನಳೀಲು,ವಿನೋದ್ ಕುಮಾರ್ ಕೆಯ್ಯರು,ವಿನೋದ್ ರೈ,ಸುಬ್ರಾಯ ಗೌಡ ಪಾಲ್ತಾಡಿ, ನವೀನಾಥ ರೈ ನಡುಮನೆ, ವಸಂತ ರೈ ಮಾಡಾವು, ಸೇಸಪ್ಪ ರೈ ಮಣಿಕ್ಕರ ಸೇರಿದಂತೆ ಮಹಿಳಾ ಸಮಿತಿ ಸದಸ್ಯರು,ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹೊರೆಕಾಣಿಕೆ ಮೆರವಣಿಗೆ :
ಫೆ.17ರಂದು ಶ್ರೀಕ್ಷೇತ್ರಕ್ಕೆ ವೈಭವದ ಹೊರೆಕಾಣಿಕೆ ಮೆರವಣಿಗೆಯ ಮೂಲಕ ಸಮರ್ಪಣೆಯಾಗಲಿದೆ. ಬೆಳಿಗ್ಗೆ 10ಕ್ಕೆ ಮಣಿಕ್ಕಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಆರಂಭವಾಗಲಿದ್ದು, ಗೋಪಾಲ ಕೃಷ್ಣ ಶ್ಯಾನುಭೋಗ್ ಮಣಿಕ್ಕಾರ ಅವರು ಉದ್ಘಾಟಿಸುವರು.ಮಧ್ಯಾಹ್ನ 12.30ಕ್ಕೆ ಮಹಾಪೂಜೆ ,ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ 3 ಗಂಟೆಗೆ ಪಾಲ್ತಾಡಿ ಚಾಕೋಟೆತಡಿ ಮಾಡ ಶ್ರೀ ಉಳ್ಳಾಕುಲು ದೈವಸ್ಥಾನದಿಂದ ಉದ್ಘಾಟನೆಗೊಂಡು ವೈಭವದ ಮೆರವಣಿಗೆಯ ಮೂಲಕ 250 ಕುಣಿತಾ ಭಜನಾ ಪಟುಗಳು, ಚೆಂಡೆ ಮೇಳ, ನಾಸಿಕ್ ಬ್ಯಾಂಡ್ ನೊಂದಿಗೆ ದೇವಸ್ಥಾನಕ್ಕೆ ಆಗಮಿಸಲಿದೆ. ಇದರ ಉದ್ಘಾಟನೆಯನ್ನು ಪಾಲ್ತಾಡಿ ಚಾಕೋಟೆತಡಿ ಮಾಡ ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸಂಜೀವ ಗೌಡ ಪಾಲ್ತಾಡಿ ನೆರವೇರಿಸುವರು.
ಸಂಜೆ 6ಕ್ಕೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳಿಗೆ ಹಾಗೂ ಋತ್ವಿಜರಿಗೆ ಪೂರ್ಣಕುಂಭದ ಸ್ವಾಗತ, ಬಳಿಕ ದೇವತಾ ಪ್ರಾರ್ಥನೆ,ಸ್ವಸ್ತಿ ಪುಣ್ಯಾಹವಾಚನ,ಆಚಾರ್ಯಾದಿ ಋತ್ವಿಗ್ವರಣ,ಪ್ರಾಸಾದ ಶುದ್ದಿ,ಅಂಕರಾರೋಹಣ,ರಕ್ಷೆಘ್ನ ಹೋಮ,ವಾಸ್ತು ಹೋಮ,ವಾಸ್ತು ಪೂಜಾ ಬಲಿ,ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಕೆಮ್ಮಿಂಜೆ ನಾಗೇಶ್ ತಂತ್ರಿಗಳು ದೀಪ ಪ್ರಜ್ವಲನೆ ಮಾಡುವರು,ಕೆಮ್ಮಿಂಜೆ ಕಾರ್ತಿಕ್ ತಂತ್ರಿ ಧಾರ್ಮಿಕ ಉಪನ್ಯಾಸ ನೀಡುವರು.ಸಂಜೆ 7.30ರಿಂದ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿ ಪುತ್ತೂರು ರಿ. ಇವರು ಅರ್ಪಿಸುವ ಕೊಲ್ಲೂರು ಶ್ರೀ ಮೂಕಾಂಬಿಕಾ ನೃತ್ಯರೂಪಕ ನಡೆಯಲಿದೆ.