Published
1 year agoon
By
Akkare Newsಧರ್ಮಸ್ಥಳ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಶ್ರೀ ಮಂಜುನಾಥನಿಗೆ ಸೇವೆ ಸಲ್ಲಿಸುತ್ತಿದ್ದ 60 ವರ್ಷ ಪ್ರಾಯದ ಲತಾ ಎಂಬ ಹೆಸರಿನ ಆನೆ ಶುಕ್ರವಾರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದೆ.
ಧರ್ಮಸ್ಥಳ ಕ್ಷೇತ್ರದ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದ ಲತಾ ಅದರಲ್ಲಿಯೂ ಮಂಜನಾಥನ ರಥೋತ್ಸವ, ಲಕ್ಷದೀಪೋತ್ಸವ, ಶಿವರಾತ್ರಿ ಉತ್ಸವಗಳಲ್ಲಿ ಎಂದಿಗೂ ಮುಂಚೂಣಿಯಲ್ಲಿರುತ್ತಿತ್ತು.
ಲತಾ ಎಂದಿಗೂ ಭಕ್ತಾಧಿಗಳಿಗೆ ತೊಂದರೆಕೊಟ್ಟಿರಲಿಲ್ಲ. ಹಾಗೆಯೇ ಅದನ್ನು ಕಂಡರೆ ಭಕ್ತರಿಗೂ ಇಷ್ಟವಾಗುತ್ತಿತ್ತು.