Published
9 months agoon
By
Akkare Newsಶಾಸಕ ಅಶೋಕ್ ಕುಮಾರ್ ವಿರುದ್ಧ ಫೇಸ್ಬುಕ್ ಕಾಮೆಂಟ್, AR ವರಿಯರ್ಸ್ ವತಿಯಿಂದ ವಿಶೇಷ ರೀತಿಯಲ್ಲಿ ಪ್ರತಿಭಟನೆ
ಪುತ್ತೂರು,ಮಾ:17. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಶೋಕ್ ಕುಮಾರ್ ರೈಯವರು ಶಾಸಕರಾದ 10 ತಿಂಗಳಿನಲ್ಲಿ ಅಭಿವೃದ್ಧಿಯ ಪರ್ವವನ್ನೇ ನಡೆಸಿದ್ದಾರೆ… ಸುಮಾರು 1474.29 ಕೋಟಿ ರೂಪಾಯಿಗಳ ದಾಖಲೆಯ ಅನುದಾನವನ್ನು ಪುತ್ತೂರು ಕ್ಷೇತ್ರಕ್ಕೆ ಬಿಡುಗಡೆ ಮಾಡಿಸಿದ್ದಾರೆ…. ಈ ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ವ್ಯಕ್ತಪಡಿಸುವ ರೀತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪುತ್ತೂರಿನ ತಾರೀತ್ತಡಿ ನಿವಾಸಿ ಜಯಾನಂದ ಬಂಗೇರ ವ್ಯಂಗ್ಯರೀತಿಯಲ್ಲಿ ಬರಹಗಳನ್ನು ಬರೆದು ಅನುದಾನ ಬಿಡುಗಡೆ ಆಗಿಲ್ಲ….ಕಾಮಗಾರಿಗಳ ವಿವರ ಕೊಡಿ ಎಂಬುದಾಗಿ ಪೋಸ್ಟು ಗಳನ್ನು ಹಾಕುತ್ತಿದ್ದ..ಇದನ್ನು ಗಮನಿಸಿದ ಶಾಸಕರ ಅಭಿಮಾನಿ ಬಳಗದ ಸದಸ್ಯರು ಬ್ಯಾಂಡ್ ಮೂಲಕ ಜಯಾನಂದರ ಮನೆಗೆ ತೆರಳಿ ಕಾಮಗಾರಿಗಳ ವಿವರದ ಫ್ಲೆಕ್ಸ್ ಅನ್ನು ಓದಿಸಿ ಇನ್ನು ಮುಂದೆ ಅಪಪ್ರಚಾರ ಮಾಡಬಾರದು ಎಂಬುದಾಗಿ ಎಚ್ಚರಿಕೆ ನೀಡಿ ಬಂದಿರುತ್ತಾರೆ.