Published
9 months agoon
By
Akkare Newsಲೋಕಸಭೆ ಚುನಾವಣೆ ಸಂದರ್ಭ ಶಾಂತಿ ಸುವ್ಯವಸ್ಥೆ ಕಾಪಾಡುವ ಕಾರಣದಿಂದ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 19 ರೌಡಿ ಶೀಟರ್ಗಳ ವಿರುದ್ಧ ಗಡಿಪಾರು ಆದೇಶವನ್ನು ಅನುಪಮ್ ಅಗರವಾಲ್ ಮಾಡಿದ್ದಾರೆ. ಏಳು ಮಂದಿಯನ್ನು ಇತ್ತೀಚೆಗಷ್ಟೇ ಬೇರೆ ಬೇರೆ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದ್ದು, ಅದರ ಮುಂದುವರಿದ ಭಾಗವಾಗಿ ಈ ಕ್ರಮ ಮಾಡಲಾಗಿದೆ.
ಮೂಡುಬಿದಿರೆಯ ಪಂಟಿಹಾಳದ ಆತೂರ್ ನಸೀಬ್ (40),ಬಜ್ಪೆಯ ಮಹಮದ್ ಸಫ್ವಾನ್ ಅಲಿಯಾಸ್ ಸಫ್ವಾನ್ (28), ಬೋಂದೆಲ್ನ ಜಯೇಶ್ ಅಲಿಯಾಸ್ ಸಚ್ಚು (28),ಪೆದಮಲೆ ಮೂಲದ ವರುಣ್ ಪೂಜಾರಿ ಅಲಿಯಾಸ್ ವರುಣ್ (30),ಕೋಡಿಕಲ್ನ ಮೊಹಮ್ಮದ್ ಅಜೀಜ್ ಅಲಿಯಾಸ್ ಕರಿ ಅಜೀಜ್ (40), ಉಳಿದಂತೆ, ಅಬ್ದುಲ್ ಇಶಾಮ್ ಅಲಿಯಾಸ್ ಹಿಶಾಮ್, ಇಡ್ಯಾ ಮೂಲದ ಕಾರ್ತಿಕ್ ಶೆಟ್ಟಿ ಅಲಿಯಾಸ್ ಕಾರ್ತಿಕ್ (28), ಕೈಕಂಬದ ದೀಕ್ಷಿತ್ ಪೂಜಾರಿ (23), ಕೃಷ್ಣಾಪುರ 4ನೇ ಬ್ಲಾಕ್ನ ಲಕ್ಷ್ಮೀಶ ಅಲಿಯಾಸ್ ಲಕ್ಷ್ಮೀಶ ಉಳ್ಳಾಲನನ್ನೂ ಗಡಿಪಾರು ಮಾಡಲಾಗಿದೆ.
ಬೋದಂತಿಲದ ಕಿಶೋರ್ ಸನಿಲ್ (36), ಉಳ್ಳಾಲದ ಕೋಡಿಮೇನ್ನ ಹಸೈನಾರ್ ಸೈಯದ್ ಅಲಿ (38), ಅಬ್ದುಲ್ ಜಲೀಲ್ ಅಲಿಯಾಸ್. ಕುದ್ರೋಳಿಯ ಜಲೀಲ್ (28), ಬೋಳೂರಿನ ರೋಷನ್ ಕಿಣಿ (18), ಕಸಬಾ ಬೆಂಗ್ರೆಯ ಅಹ್ಮದ್ ಸಿನಾನ್ (21), ಕಡೆಕಾರ್ ನಿವಾಸಿ ನಿತೇಶ್ ಕುಮಾರ್ (28), ಕುತ್ತಡ್ಕದ ಗುರುಪ್ರಸಾದ್ (38), ಕುತ್ತಡ್ಕದ ಭರತ್ ಪೂಜಾರಿ (31), ಜೆಪ್ಪು ಕುಡುಪಾಡಿ ನಿವಾಸಿ ಸಂದೀಪ್ ಶೆಟ್ಟಿ (37) ಇಷ್ಟು ಮಂದಿಯನ್ನು ಗಡಿಪಾರು ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.