Published
9 months agoon
By
Akkare Newsಕಾಸರಗೋಡು: ಕಾಸರಗೋಡು ರೈಲು ನಿಲ್ದಾಣದಲ್ಲಿ ರೈಲಿನಿಂದ ಬಿದ್ದು ಒಡಿಸ್ಸಾ ನಿವಾಸಿಯೋರ್ವರು ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.ಮೃತ ವ್ಯಕ್ತಿ ಒಡಿಸ್ಸಾದ ಸುಶಾಂತ್ ( 41) ಎಂದು ತಿಳಿದು ಬಂದಿದೆ.
ಇವರು ಮಂಗಳೂರಿನ ಪೆಟ್ರೋಲ್ ಬಂಕ್ ನೌಕರರಾಗಿದ್ದರು. ಮಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಕಾಸರಗೋಡು ರೈಲು ನಿಲ್ದಾಣದಲ್ಲಿ ಕುಡಿಯುವ ನೀರು ಖರೀದಿಸಲು ಇಳಿದಿದ್ದು ಸಂದರ್ಭದಲ್ಲಿ ರೈಲು ಮುಂದಕ್ಕೆ ಚಲಿಸಿದೆ. ಇದರಿಂದ ಓಡಿ ರೈಲಿಗೆ ಹತ್ತಲು ಯತ್ನಿಸಿದಾಗ ರೈಲು ಹಳಿ ಮತ್ತು ಫ್ಲ್ಯಾಟ್ ಫಾಮ್ ನಡುವೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತದೇಹದಿಂದ ಲಭಿಸಿದ ಪಾನ್ ಕಾರ್ಡ್ ನಿಂದ ಗುರುತು ಪತ್ತೆ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.