ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಸುಳ್ಯದ ಮಹಿಳಾ ಅರಣ್ಯಾಧಿಕಾರಿ ನೇತೃತ್ವದಲ್ಲಿ ಭರ್ಜರಿ ಬೇಟೆ:ಅಕ್ರಮ ಮರ ದಂಧೆ ಪತ್ತೆ ಹಚ್ಚಿ ಮರ ಸಹಿತ ವಾಹನ ಹಾಗೂ ಆರೋಪಿಗಳ ದಸ್ತಗಿರಿ

Published

on

ದಕ್ಷಿಣ ಕನ್ನಡ/ಸುಳ್ಯ: ಸುಳ್ಯದ ಅರಣ್ಯಾಧಿಕಾರಿಗಳ ತಂಡ ಅಕ್ರಮ ಮರ ಸಾಗಾಟದ ಪ್ರಕರಣವೊಂದನ್ನು ಬೇಧಿಸಿದ್ದಾರೆ.

ಮಾ.30ರಂದು ಸುಳ್ಯ ಅರಣ್ಯ ಶಾಖೆಯ ಸುಳ್ಯ ಕಸಬಾ ಗ್ರಾಮದ ಶಾಂತಿನಗರ ಎಂಬಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಪರಿವರ್ತಿಸಿ ಸಾಗಾಟ ಮಾಡಲು ಯತ್ನಿಸಿದ ಪ್ರಕರಣವನ್ನು ಸುಳ್ಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಶ್ರೀಮತಿ ಸೌಮ್ಯ ಪಿ. ಎನ್. ನೇತೃತ್ವದ ತಂಡ ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿಸಿದ್ದಾರೆ.

ಅಕ್ರಮ ಸಾಗಾಟಕ್ಕೆ ಬಳಸಲಾದ 1 ಲಾರಿ, 1ಕ್ರೇನ್, ಹಾಗೂ 7.946 ಘ. ಮೀ. ಮರದ ದಿಮ್ಮಿ‌ಹಾಗೂ ಪ್ರಕರಣದ ಆರೋಪಿಗಳಾದ ಸ್ಥಳದ ಮಾಲಿಕ ಕೆ. ಕೃಷ್ಣಪ್ಪ ನಾಯ್ಕ ಶಾಂತಿನಗ, ಮರದ ವ್ಯಾಪಾರಿ ರಿಫಾಯಿ ಹಳೆಗೇಟು, ಕ್ರೇನ್ ಚಾಲಕ ಗೋಪಾಲಕೃಷ್ಣ ಜಯನಗರ, ಲಾರಿ ಚಾಲಕ ಜಗದೀಶ್ ಶಾಂತಿ ಗ್ರಾಮ ಇವರನ್ನು ದಸ್ತಗಿರಿ ಮಾಡಲಾಗಿದೆ. ವಾಹನ ಮತ್ತು ಸೊತ್ತುಗಳ ಮೌಲ್ಯ 15 ಲಕ್ಷ ಎಂದು ಅಂದಾಜಿಸಲಾಗಿದೆ.







ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಸೌಮ್ಯ. ಪಿ. ಎನ್, ರಾಘವೇಂದ್ರ ಪ್ರಸಾದ್, ಗಸ್ತು ಅರಣ್ಯ ಪಾಲಕರಾದ ಶ್ರೀಮತಿ ಗೀತಾ, ಶ್ರೀಮತಿ ಪುಷ್ಪಾವತಿ, ನಿಂಗಪ್ಪ ಕೊಪ್ಪ, ವಾಹನ ಚಾಲಕ ಪುರುಷೋತ್ತಮ್ ಭಾಗವಹಿಸಿದ್ದರು. ವಲಯ ಅರಣ್ಯ ಅಧಿಕಾರಿಮಂಜುನಾಥ ಎನ್. ರವರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement