Published
9 months agoon
By
Akkare Newsಮಂಗಳೂರು: ಭಾರತ ಕಮ್ಯೂನಿಸ್ಟ್ ಪಕ್ಷದ ದ.ಕ. ಮತ್ತು ಉಡುಪಿ ಜಿಲ್ಲಾ ಮಂಡಳಿಯ ರಾಜಕೀಯ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಭಾಗವಹಿಸಿ, ಸಮಾಲೋಚನೆ ನಡೆಸಿದರು.
INDIA ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಭಾರತ ಕಮ್ಯೂನಿಸ್ಟ್ ಪಕ್ಷದ ರಾಜಕೀಯ ಸಮಾವೇಶ ಭಾನುವಾರ ಬಂಟ್ವಾಳ ಬೈಪಾಸ್ ರಸ್ತೆಯಲ್ಲಿರುವ ಕಾಂ| ಎ. ಶಾಂತಾರಾಮ ಪೈ ಸ್ಮಾರಕ ಭವನದಲ್ಲಿ ನಡೆಯಿತು.
ಸಿಪಿಐ ಪಕ್ಷದ ದ.ಕ. ಹಾಗೂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್, ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ರಾಷ್ಟ್ರೀಯ ನಾಯಕ ಸಿದ್ದಣ್ಣ ಗೌಡ ಪಾಟೀಲ್, ಮಾಜಿ ಕಾರ್ಯದರ್ಶಿ ವಿ. ಕುಕ್ಯಾನ್, ಜಿಲ್ಲಾ ಮುಖಂಡ ಎಚ್.ವಿ. ರಾವ್, ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್, ರಾಜ್ಯ ಸಮಿತಿ ಸದಸ್ಯ ಕರುಣಾಕರ್, ಪ್ರಮುಖರಾದ ಬಾಬು ಭಂಡಾರಿ, ಪ್ರೇಮಾನಾಥ್, ಜಯಂತ್, ತಿಮ್ಮಪ್ಪ, ಸರೋಜಿನಿ, ಬೇಬಿ ಮೊದಲಾದವರು ಉಪಸ್ಥಿತರಿದ್ದರು.