Published
9 months agoon
By
Akkare Newsಬೆಳ್ತಂಗಡಿ: ಆಪ್ ಮೂಲಕ ಸಾಲ ನೀಡುವುದಾಗಿ ಹೇಳಿ ಮಹಿಳೆಗೆ ವಂಚಿಸಿರುವ ಘಟನೆ ತೆಂಕಕಾರಂದೂರು ಗ್ರಾಮದಲ್ಲಿ ನಡೆದಿದೆ.
ತೆಂಕಕಾರಂದೂರು ಗ್ರಾಮದ ನೆಬಿಸಾ (38) ಎಂಬವರಿಗೆ ಅಪರಿಚಿತರು ಮಾ. 21 ರಂದು ಫೇಸ್ ಬುಕ್ ನಲ್ಲಿ ಮನಿ ವ್ಯೂ ಪರ್ಸನಲ್ ಲೋನ್ ಆಪ್ ಮೂಲಕ ಪರಿಚಯಿಸಿಕೊಂಡಿದ್ದರು.
ನೆಬಿಸಾ ಅವರು ಸಾಲದ ಬಗ್ಗೆ ಅಪರಿಚಿತರಿಂದ ಮಾಹಿತಿ ಪಡೆದು 5 ಲಕ್ಷ ರೂ.ಸಾಲ ಪಡೆಯಲು ದಾಖಲೆಗಳನ್ನು ಕಳುಹಿಸಿದ್ದರು. ಬಳಿಕ ಪೋನ್ ಮೂಲಕ ನೆಬಿಸಾ ಅವರನ್ನು ಸಂಪರ್ಕಿಸಿ, ಮಾ.28ರ ತನಕ ವಿವಿಧ ಹಂತದಲ್ಲಿ ಒಟ್ಟು 96,743ರೂ. ಗಳನ್ನು ಹಣವನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ.
ಬಳಿಕ ಸಾಲವನ್ನು ನೀಡದೇ, ವರ್ಗಾಯಿಸಿಕೊಂಡ ಹಣವನ್ನು ಹಿಂತಿರುಗಿಸದೇ ವಂಚಿಸಿರುವುದಾಗಿ ವೇಣೂರು ಪೊಲೀಸ್ ಠಾಣೆಗೆ ನೀಡದ ದೂರಿನಲ್ಲಿ ತಿಳಿಸಿದ್ದಾರೆ.