ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ರಾಮೇಶ್ವರಂ ಕೆಫೆ ಸ್ಫೋಟ ನಡೆಸಿದ್ದು ತೀರ್ಥಹಳ್ಳಿಯ ಮುಸ್ಸಾವಿ‌ರ್ ಹುಸೇನ್, NIA ಪತ್ರಿಕಾ ಪ್ರಕಟಣೆ ಬಿಡುಗಡೆ

Published

on

ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್‌ 1 ರಂದು ದೊಡ್ಡ ಸ್ಫೋಟವೊಂದು ನಡೆದಿತ್ತು. ಇದರ ತನಿಖೆ ಮುಂದುವರಿದಿದ್ದು ಇದೀಗ ಎನ್‌ಐಎ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಈ ಸ್ಫೋಟದ ಪ್ರಮುಖ ಆರೋಪಿ ತೀರ್ಥಹಳ್ಳಿಯ ಮುಸ್ಸಾವಿರ್‌ ಹುಸೇನ್‌ ಶಾಜಿಬ್‌ ಮತ್ತು ಸಹ ಸಂಚುಕೋರ ಅಬ್ದುಲ್‌ ಮಥೀನ್‌ ತಾಹಾ ಎಂದು ಹೇಳಿದೆ.

ಚಿಕ್ಕಮಗಳೂರಿನ ಕಳಸ ನಿವಾಸಿ ಮಝಮ್ಮಿಲ್‌ ಶರೀಫ್‌ ಎಂಬಾತ ಆರೋಪಿಗಳಿಗೆ ಲಾಜಿಸ್ಟಿಕ್ಸ್‌ ಬೆಂಬಲ ನೀಡಿದ್ದು ಈತನನ್ನು ಮಾ.26 ರಂದು ಬಂಧನ ಮಾಡಲಾಗಿದ್ದು, ಈತ ಕಸ್ಟಡಿಯಲ್ಲಿದ್ದಾನೆ. ಇನ್ನು ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಎನ್‌ಐಎ ತಂಡ ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದಿದೆ. ಹಾಗೂ ಇವರಿಗಾಗಿ ಎನ್‌ಐಎ 10 ಲಕ್ಷಗಳ ಬಹುಮಾನ ಕೂಡಾ ಘೋಷಣೆ ಮಾಡಿದೆ.




ಬಂಧಿತ ಆರೋಪಿಗಳ ಕಾಲೇಜು ಮತ್ತು ಶಾಲಾ ಸಮಯದ ಸ್ನೇಹಿತರು ಸೇರಿ ಎಲ್ಲಾ ಪರಿಚಯಸ್ಥರನ್ನು ಕರೆಸಿ ಪ್ರಕರಣದ ಸಾಕ್ಷ್ಯ ಮತ್ತು ಮಾಹಿತಿ ಸಂಗ್ರಹದ ವಿಚಾರಣೆ ನಡೆಯುತ್ತಿದೆ. ಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಎಲ್ಲರ ಸಹಕಾರವನ್ನು ಎನ್‌ಐಎ ಕೋರಿದೆ ಎಂದು ವರದಿಯಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement