Published
9 months agoon
By
Akkare Newsಕಾಣಿಯೂರು: ಅರಣ್ಯ ಇಲಾಖೆಯ ಪುತ್ತೂರು ವಲಯದ ಕೊಯಿಲ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರ ಮೇಲೆ ಹೊರಿಸಲಾದ ಆರೋಪಗಳ ಕುರಿತು ತನಿಖೆ ನಡೆದು ಇದೀಗ ಅವರ ಮೇಲೆ ಹೊರಿಸಲಾದ ಆರೋಪಗಳು ಸಾಬೀತಾಗದೆ ಇರುವುದರಿಂದ ಅವರನ್ನು ಆರೋಪ ಮುಕ್ತಗೊಳಿಸಿ ತಡೆಹಿಡಿಯಲಾದ ವೇತನ ಮರುಪಾವತಿಗೆ ಆದೇಶ ನೀಡಲಾಗಿದೆ.
ಪುತ್ತೂರು ವಲಯದ ಕೊಯಿಲ ಶಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಜೀವ ಕೆ.ರವರ ವಿರುದ್ಧ ವಿವಿಧ ಆರೋಪಗಳ ಹಿನ್ನಲೆಯಲ್ಲಿ ಇಲಾಖೆ ಅವರನ್ನು ಅಮಾನತುಗೊಳಿಸಿತ್ತು.
ಇದಕ್ಕೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ತಡೆಯಾಜ್ಞೆ ನೀಡಿತ್ತು. ಬಳಿಕದಲ್ಲಿ ತಡೆಯಾಜ್ಞೆ ತೆರವು ಮಾಡಿ ಅರ್ಜಿ ವಜಾಗೊಂಡಿತ್ತು. ಇದೀಗ ಇಲಾಖೆ ವೇತನ ಪಾವತಿಗೆ ಆದೇಶಿಸಿದೆ ಎಂದು ತಿಳಿದುಬಂದಿದೆ.