Published
9 months agoon
By
Akkare News ಪುತ್ತೂರು: ಏ10: ಕುರಿಯ ಏಳ್ನಾಡುಗುತ್ತು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಆರಾಧನಾ ಸಮಿತಿಯಿಂದ ವಿಶೇಷ ಪೂಜೆ, ಸಮಾರಾಧನೆ, ಸಾರ್ವಜನಿಕ ಅನ್ನಸಂತರ್ಪಣೆ ಕುರಿಯ ಮಾಡಾವು ಏಳ್ಳಾಡುಗುತ್ತು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಆರಾಧನಾ ಸಮಿತಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ನಡೆಯುವ ಧ್ವಜಾರೋಹಣದ ಅಂಗವಾಗಿ ಶ್ರೀ ದೇವಸ್ಥಾನದಲ್ಲಿ ಮಹಾಪೂಜೆ, ಸಮಾರಾಧನೆ, ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ.
ಧ್ವಜಾರೋಹಣ ದಂದು ಪೂರ್ವಶಿಷ್ಠ ಪದ್ಧತಿಯಂತೆ ಕುರಿಯ ಮಾಡಾವು ಏಳ್ಳಾಡುಗುತ್ತು ಮನೆತನದ ಶ್ರೇಯಸ್ಸು ಹಾಗೂ ಗೌರವಾರ್ಥವಾಗಿ ನಡೆಯುವ ಕಾರ್ಯಕ್ರಮದ ಅಂಗವಾಗಿ ಈ ವಿಶೇಷ ಪೂಜೆ ನಡೆಯಲಿದೆ.