Published
8 months agoon
By
Akkare Newsಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್ ಮಾಸ್ಟರ್ ಮೈಂಡ್ Pಅಬ್ದುಲ್ ಮತೀನ್ ತಾಹನನ್ನು ಕೊನೆಗೂ NIA ಅರೆಸ್ಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳದಿಂದ ವಿಚಾರಣೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ. ಸದ್ಯ ಆತನ ವಿಚಾರಣೆ ನಡೆಯುತ್ತಿದೆ.
ಬಾಂಬ್ ಬ್ಲಾಸ್ಟರ್ ಅಬ್ದುಲ್ ಮತೀನ್ ತಾಹ ಸಾಮಾನ್ಯ ವ್ಯಕ್ತಿ ಅಲ್ವೇ ಅಲ್ಲ. ಆತ ಪದವೀಧರ. ಆತನ ತಂದೆ ದೇಶಕ್ಕಾಗಿ ಹೋರಾಡಿದ ನಿವೃತ್ತ ಯೋಧ. ಆದರೆ ಈತನಿಗೇಕೆ ಇಂಥ ಕೆಟ್ಟಬುದ್ಧಿ ಬಂತು?. ಒಬ್ಬ ಯೋಧನ ಮಗನಾಗಿ ಬಾಂಬ್ ಇಡುವ ಕೆಲಸ ಮಾಡಿದನೇ? ಅಬ್ದುಲ್ ಮತೀನ್ ತಾಹ ಬಾಲ್ಯ, ಪೋಷಕರು ಆತನ ಹಿನ್ನಲೆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಅಬ್ದುಲ್ ಮತೀನ್ ತಾಹ ಅತ್ಯಂತ ಚುರುಕಾದ ಎಂಜಿನಿಯರಿಂಗ್ ಪದವೀಧರ. ತೀರ್ಥಹಳ್ಳಿಯಲ್ಲಿ ಪ್ರೌಢಶಾಲೆ ಮುಗಿಸಿ ಬೆಂಗಳೂರಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದನು. ಬೆಂಗಳೂರಿಗೆ ಬಂದ ವೇಳೆ ಉಗ್ರರ ಸಂಪರ್ಕಕ್ಕೆ ಬಂದಿದ್ದನು.
ಅಬ್ದುಲ್ ಮತೀನ್ ತಾಹ ಪೋಷಕರಿಗೆ ಒಬ್ಬನೇ ಮಗನಾಗಿದ್ದನು. ಐಇಡಿ ಬಾಂಬ್ ತಯಾರಿಕೆಯ ಎಕ್ಸ್’ಪರ್ಟ್ ಆಗಿದ್ದನು. ಕಳೆದ ನಾಲ್ಕು ವರ್ಷಗಳಿಂದ ನಾಪತ್ತೆಯಾಗಿದ್ದ ಈತ. ವಿವಿಧ ರಾಜ್ಯಗಳಲ್ಲಿ ನಾನಾ ಹೆಸರುಗಳಿಂದ ತಲೆಮರೆಸಿಕೊಂಡಿದ್ದನು.ಈ ಹಿಂದೆ ಎನ್.ಐ.ಎ ತಾಹನ ಪತ್ತೆಗೆ ಮೂರು ಲಕ್ಷ ರಿವಾರ್ಡ್ ಘೋಷಿಸಿತ್ತು. ರಾಮೇಶ್ವರಂ ಕೆಫೆ ಬ್ಲಾಸ್ಟ್ ನಂತರ ಹತ್ತು ಲಕ್ಷ ರಿವಾರ್ಡ್ ಘೋಷಿಸಲಾಗಿತ್ತು. ಮಂಗಳೂರು ಕುಕ್ಕರ್ ಬ್ಲಾಸ್ಟ್, ರಾಮೇಶ್ವರಂ ಕೆಫೆ ಬ್ಲಾಸ್ಟ್, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಾಸ್ಟರ್ ಮೈಂಡ್ ಆಗಿದ್ದಾನೆ.
ಇನ್ನು ಅಬ್ದುಲ್ ಮತೀನ್ ತಾಹ ತಂದೆ ದೇಶಕ್ಕಾಗಿ ಹೋರಾಡಿದ ಯೋಧ. ವರ್ಷದ ಹಿಂದೆ ಅವರು ಮೃತಪಟ್ಟಿದ್ದರು. ಆದರೆ ಅವರಿಗಿದ್ದ ಒಬ್ಬನೇ ಮಗ ಇಂತಹ ದಾರಿ ಹಿಡಿದಿದ್ದಾನೆ ಎಂದರೆ ನಂಬಲು ಅಸಾಧ್ಯ.