Published
8 months agoon
By
Akkare Newsಪುತ್ತೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 5 ಜಿಪಂ ಕ್ಷೇತ್ರ ವ್ಯಾಪ್ತಿಗೆ ಉಸ್ತುವಾರಿಗಳನ್ನು ಮತ್ತು ಸಹ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಪುತ್ತೂರು ಶಾಸಕರಾದ ಅಶೋಕ್ ರೈ ಸೂಚನೆಯಂತೆ ಬ್ಲಾಕ್ ಅಧ್ಯಕ್ಷರುಗಳಾದ ಎಂ ಬಿ ವಿಶ್ವನಾಥ ರೈ ಹಾಗೂ ಡಾ. ರಾಜಾರಾಂ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಶಿಫಾರಸ್ಸಿನಂತೆ ಆ ನೇಮಕ ಮಾಡಲಾಗಿದೆ.
ನೆಟ್ಟಣಿಗೆ ಮುನ್ನೂರು: ಅನಿತಾ ಹೇಮನಾಥ ಶೆಟ್ಟಿ, ರಕ್ಷಿತ್ ರೈ ಕುಂಬ್ರ, ರಮೇಶ್ ರೈ ಸಾಂತ್ಯ, ಭಾರತಿ ಶಿವಪ್ಪ ಪೂಜಾರಿ,
ಪಾಣಾಜೆ: ಶ್ರೀಪ್ರಸಾದ್ ಪಾಣಾಜೆ, ಆಲಿಕುಂಞ ಕೊರಿಂಗಿಲ, ರಮೇಶ್ ರೈ ಡಿಂಬ್ರಿ,
ನರಿಮೊಗರು: ಎಸ್ ಡಿ ವಸಂತ್, ಜೆ ಕೆ ವಸಂತ ಕುಮಾರ್ ರೈ, ಅಬ್ದುಲ್ ಖಾದರ್ ಮೇರ್ಲ
ಉಪ್ಪಿನಂಗಡಿ: ನಿರಂಜನ್ ರೈ ಮಠಂತಬೆಟ್ಟು, ದೇವದಾಸ್ ರೈ, ಯು ಟಿ ತೌಸೀಫ್
ಪುಣಚ: ಪದ್ಮನಾಭ ಪೂಜಾರಿ, ಫಾರೂಕ್ ಬಾಯಬ್ಬೆ, ಮತ್ತು ಪ್ರವೀಣ್ ಶೆಟ್ಟಿ ಅಳಕೆ ಮಜಲುರವರನ್ನು ನೇಮಿಸಲಾಗಿದೆ.
ಗ್ರಾಮ: ಒಳಮೊಗ್ರು, ಬಡಗನ್ನೂರು ಮತ್ತು ಪಡುವನ್ನೂರು ಗ್ರಾಮಗಳಿಗೆ ಉಸ್ತುವಾರಿಗಳಾಗಿ ಪ್ರಮೋದ್ ಕೆ ಎಸ್, ಮಹಾಬಲ ರೈ ಒಳತ್ತಡ್ಕ, ಯಾಕೂಬ್ ಮುಲಾರ್, ವಿನೋದ್ ರೈ, ಪುರಂದರ್ ರೈ ಕುದ್ಮಾಡಿ, ಅಶ್ರಫ್, ಬದ್ರುದ್ದೀನ್, ರಾಕೇಶ್ ರೈ, ದಮೇಂದ್ರ ಪದಡ್ಕ, ಶಿವಪ್ಪಪೂಜಾರಿ, ಚಿತ್ರಾ, ಕಲಾವತಿ ಪಟ್ಲಡ್ಕ, ಮತ್ತು ಶರೀಫ್ ಕೊಯಿಲರನ್ನು ನೇಮಕ ಮಾಡಲಾಗಿದೆ. ಉಸ್ತುವಾರಿಗಳು ತಕ್ಷಣದಿಂದಲೇ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆಯೂ ಆದೇಶಿಸಲಾಗಿದೆ.