ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಭರ್ಜರಿ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಜೆಸಿಬಿಯಲ್ಲಿ ಪುಷ್ಪವೃಷ್ಟಿಗೈದು ಸ್ವಾಗತ ಕೋರಿದ ಕಾರ್ಯಕರ್ತರು

Published

on

ಮಂಗಳೂರು: ದಕ್ಷಿಣ ಕನ್ನಡವನ್ನು ದೇಶದ ಬಲಿಷ್ಠ ಜಿಲ್ಲೆಯಾಗಿ ರೂಪಿಸಲು ಶ್ರಮಿಸುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.ಅಡ್ಡೂರಿನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.

ಜಿಲ್ಲೆಯನ್ನು ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಮಾಡಲು ಬೇಕಾದ ಮೂಲಸೌಕರ್ಯಗಳು ಇವೆ. ಇದರ ಜೊತೆಗೆ ಹೂಡಿಕೆ, ಉದ್ದಿಮೆಗೆ ಪ್ರೋತ್ಸಾಹ ನೀಡಿ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಪೂರಕ ವಾತಾವರಣ ನಿರ್ಮಿಸಲಾಗುವುದು. ಇದರಿಂದ ಉದ್ಯೋಗ ಸೃಷ್ಟಿಯೂ ಸಾಧ್ಯ. ಮಾತ್ರವಲ್ಲ ಎಂದರು.











ಅಡ್ಡೂರಿಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಆಗಮಿಸುತ್ತಿದ್ದಂತೆ ಹೆಗಲ ಮೇಲೆ ಕುಳ್ಖಿರಿಸಿ ವೇದಿಕೆಗೆ ಕರೆದೊಯ್ಯಲಾಯಿತು. ಕರೆದೊಯ್ಯುವಾಗ ರಸ್ತೆಯ ಇಕ್ಕೆಲಗಳಲ್ಲಿ ಎರಡು ಜೆಸಿಬಿ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು.ಎಡಪದವು, ಕುಪ್ಪೆಪದವು, ಗುರುಪುರ ಕೈಕಂಬ, ಅಡ್ಡೂರು ಮೊದಲಾದ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ನಡೆಯಿತು.







ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಇನಾಯತ್ ಅಲಿ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್, ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಾಂಬ್ಳಿ, ಯೂತ್ ಕಾಂಗ್ರೆಸ್ ಜಿಲ್ಲಾ ಉಪದ್ಯಾಕ್ ಗಿರೀಶ್ ಆಳ್ವ, ಹರಿಯಪ್ಪ ಮುತ್ತೂರು, ಮಹಿಳಾ ಶಾರ್ಲೆಟ್ ಪಿಂಟೋ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಾರಿಕಾ ಪೂಜಾರಿ, ಕಾರ್ಪೋರೇಟರ್ ತನ್ವೀರ್ ಶಾ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ನಾರಾಯಣ ಗುರು ಮಂದಿರ, ಧಾರ್ಮಿಕ ಕೇಂದ್ರಗಳಿಗೆ ಭೇಟಿ:
ಕುಪ್ಪೆಪದವು ಬ್ರಹ್ಮಶ್ರೀ ಗುರುನಗರ ಶ್ರೀ ನಾರಾಯಣ ಗುರು ಮಂದಿರ, ಕುಪ್ಪೆಪದವು ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನ, ಎಡಪದವು ಶ್ರೀರಾಮ ಮಂದಿರ, ಕುಪ್ಪೆಪದವು ಬದ್ರಿಯಾ ಜುಮಾ ಮಸೀದಿ, ಕುಪ್ಪೆಪದವು ಇಮ್ಮೆಕ್ಯುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್ ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

Continue Reading
Click to comment

Leave a Reply

Your email address will not be published. Required fields are marked *

Advertisement