Published
8 months agoon
By
Akkare Newsಪುತ್ತೂರು: ಮಿಸ್ಟರ್ ಎಂ ಎಲ್ ಎ ಅಶೋಕ್ ರೈ ಯೂ ಆರ್ ಲಯನ್ ಆಫ್ ಸೌತ್ ಕೆನರಾ…. ಯೂ ಆರ್ ಗ್ರೇಟ್ ಪರ್ಸನ್ ಇದು ಎಐಸಿಸಿ ಕರ್ನಾಟಕದ ಉಸ್ತುವಾರಿಯಾಗಿರುವ ರಣಜೀತ್ ಸಿಂಗ್ ಸುರ್ಜೆವಾಲ ಹೇಳಿದ ಮಾತು.
ಮಂಗಳೂರಿನಲ್ಲಿ ಸೋಮವಾರ ಕರ್ನಾಕಟದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ರಣಜೀತ್ ಸಿಂಗ್ ಸುರ್ಜೆವಾಲರವರು ಪಕ್ಷದ ಪ್ರಮುಖರ ಸಭೆಯನ್ನು ಕರೆದಿದ್ದರು.ಸಭೆಯಲ್ಲಿ ಲೋಕಸಭಾ ಚುನಾವಣೆಯ ಕಾರ್ಯವೈಖರಿ ಬಗ್ಗೆ ಜಿಲ್ಲೆಯ ಪ್ರಮುಖ ನಾಯಕರುಗಳ ಜೊತೆ ಚರ್ಚೆ ನಡೆಸಿದರು.ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರುಯವರ ಗೆಲುವಿನಲ್ಲಿಕೈಗೊಳ್ಳಬೇಕಾದ ಕಾರ್ಯವೈಖರಿ ಬಗ್ಗೆ ಚರ್ಚೆ ನಡೆಸಿದರು.
ಕಾರ್ಯಕ್ರಮ ಮುಗಿಸಿ ಹೊರ ಬರುತ್ತಿದ್ದಂತೆಯೇ ಶಾಸಕರಾದ ಅಶೋಕ್ ರೈ ಕಂಡು ಸಂತೋಷದಿಂದ ತಬ್ಬಿಕೊಂಡು ” ಮಿಸ್ಟರ್ ಅಶೋಕ್ ರೈ ಯೂ ಆರ್ ಲಯನ್ ಆಫ್ ಸೌತ್ ಕೆನರಾ..ಯೂಆರ್ ಗ್ರೇಟ್ ಎಂಎಲ್ಎ ಎಂದು ಹೇಳಿ ತಬ್ಬಿಕೊಂಡು ಬೆನ್ನು ತಟ್ಟಿ ಅಭಿನಂದಿಸಿದರು. ಆ ಬಳಿಕ ಸುರ್ಜೆವಾಲರವರು ಅಲ್ಲಿಂದ ಪ್ರಯಾಣಿಸಿದರು. ಪ್ರಯಾಣಿಸುವ ವೇಳೆಯೂ ಕಾರಿನಿಂದ ಶಾಸಕ ಅಶೋಕ್ ರೈ ಬಗ್ಗೆ ಮತ್ತೆ ಅದೇ ಪದವನ್ನು ಬಳಸಿ ಅಭಿನಂದಿಸಿದರು. ಈ ವೇಳೆ ನೆರೆದ ಕಾರ್ಯಕರ್ತರು ಶಾಸಕರಾದ ಅಶೋಕ್ ರೈಯವರಿಗೆ ಮತ್ತು ಸುರ್ಜೆವಾಲರಿಗೆ ಜೈ ಕಾರ ಹಾಕಿದರು.