Published
8 months agoon
By
Akkare Newsಸುಳ್ಯ: ಮನೆಮಂದಿ ಕೆಲಸಕ್ಕೆ ತೆರಳಿದ್ದ ವೇಳೆ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ಕಳವುಗೈದಿರುವುದಾಗಿ ಸುಳ್ಯ ಕಸಬಾ ಗ್ರಾಮದ ಕೆಎಫ್ಡಿಸಿ ಕ್ವಾಟ್ರಸ್ನ ನಾಚಪ್ಪ ಎ.ಸಿ. ಅವರು ಎ. 29ರಂದು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
2 ಗ್ರಾಂ ತೂಕದ ಹಳೆಯ ಬೆಂಡೋಲೆ 1 ಜೊತೆ, ತಲಾ 2 ಗ್ರಾಂ ತೂಕದ ಹಳೆಯ ಚಿನ್ನದ ಉಂಗುರ 2, 8 ಗ್ರಾಂ ತೂಕದ ಹಳೆಯ ಚಿನª ತಾಳಿ ಚೈನು, 2 ಗ್ರಾಂ ತೂಕದ ಹಳೆಯ ಚಿನ್ನದ ಸರ, 30 ಸಾವಿರ ರೂ.ನಗದು ಕಳವುಗೈದಿದ್ದಾರೆ. ಒಟ್ಟು ಸುಮಾರು 94 ಸಾವಿರ ರೂ. ಮೌಲ್ಯದ ನಗ-ನಗದು ಕಳವಾಗಿದೆ.
ಬಡ್ಡಕಟ್ಟೆ: ಮಟ್ಕಾ ಅಡ್ಡೆಗೆ ದಾಳಿ
ಬಂಟ್ವಾಳ: ಬಂಟ್ವಾಳದ ಬಡ್ಡಕಟ್ಟೆಯಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಪೊಲೀಸರು ನಗದು ವಶಪಡಿಸಿಕೊಂಡು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.