Published
8 months agoon
By
Akkare Newsಮೇ.01: ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶೀಘ್ರ ಮಳೆಗಾಗಿ ವಿಶೇಷ ಪೂಜೆ ಬ್ರಹ್ಮಶ್ರೀ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಇಂದು ಜರಗಿತು
ಆ ಪ್ರಯುಕ್ತ 12 ಕಾಯಿ ಗಣಹವನ,ಆಶ್ಲೇಷ ಬಲಿ, ರುದ್ರ ಪಾರಾಯಣ, ಶತ ರುದ್ರಾಭಿಷೇಕ, ಸೀಯಾಳ ಅಭಿಷೇಕ, ಕಲಶಾಭಿಷೇಕ ಸೇವೆ ಗಳೊಂದಿಗೆ ಶೀಘ್ರ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು.ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಸದಸ್ಯರಾದ ಸತ್ಯನಾರಾಯಣ ಭಟ್ ಕಾಯಂಬಾಡಿ ಸಂತೋಷ್ ರೈ ಬಳ್ಳ, ಧರ್ಮಣ್ಣ ನಾಯ್ಕ ಗರಡಿ, ರಾಮಚಂದ್ರ ಭಟ್,ಧರ್ಮಪಾಲ ಗೌಡ ಮರಕಡ ಕಾಚಿಲ,ಮಾಯಿಲಪ್ಪ ಗೌಡ ಪಟ್ಟೆ ಎಣ್ಣೂರು, ಶ್ರೀಮತಿ ಪವಿತ್ರ ಮಲ್ಲೆಟ್ಟಿ, ಶ್ರೀಮತಿ ಮಾಲಿನಿ ಕುವ್ವ, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.