ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಮೇ 24: ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ತುಳುನಾಡ ಸಂಪ್ರದಾಯ ‘ಪತ್ತನಾಜೆ ಉತ್ಸವ’

Published

on

 


ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವ ಸಂಪ್ರದಾಯ ಪ್ರಕಾರ ಮೇ 24ರಂದು ಪತ್ತನಾಜೆ ಉತ್ಸವ ನಡೆಯಲಿದೆ.
ಹತ್ತನಾವಧಿಎನ್ನಲಾಗುತ್ತದೆ. ತುಳುಭಾಷೆಯಲ್ಲಿ ಪತ್ತನಾಜೆ ಎನ್ನುತ್ತೇವೆ. ಬಾರಕೂರಿನಿಂದ ಚಂದ್ರಗಿರಿವರೆಗಿನ ಪರಶುರಾಮ ಸೃಷ್ಟಿಯ ತುಳುನಾಡಿನಾದ್ಯಂತ ಪತ್ತನಾಜೆ ವೃಷಭವವಾಸದ ಹತ್ತನೇ ದಿನವನ್ನು
ಆಚರಿಸಲ್ಪಡುತ್ತದೆ. ದೇವಾಲಯಗಳಲ್ಲಿ ಬಲಿ, ಉತ್ಸವಗಳು ಪತ್ತನಾಜೆಯಿಂದ ಮುಂದಿನ ದೀಪಾವಳಿ ಬಲೀಂದ್ರಪೂಜೆಯ ತನಕ ಸ್ಥಗಿತವಾಗುತ್ತದೆ. ದೈವಗಳ ವಾರ್ಷಿಕ ಕೋಲ, ನೇಮ ನಡಾವಳಿಗಳೂ ಮುಕ್ತಾಯಗೊಳ್ಳುತ್ತದೆ, ಕರಾವಳಿಯ ಯಕ್ಷಗಾನಮೇಳಗಳೂ ಗೆಜ್ಜೆಯನ್ನು ಬಿಚ್ಚಿ ವಿರಾಮದಲ್ಲಿರುತ್ತದೆ. ಹಿಂದಿನ ಕಾಲದಲ್ಲಿ ರೈತಾಪಿ ಜನರು ಪತ್ತನಾಜೆಯಿಂದ ಗದ್ದೆ ಉಳುಮೆ ಆರಂಬಿಸುತ್ತಿದ್ದರು. ಸದ್ರಿ ದಿನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿಯ ಬಲಿ ಉತ್ಸವದಲ್ಲಿ ಮೂರು ಹೊತ್ತು ಉಡಿಕೆ, ಚೆಂಡೆ, ವಾದ್ಯಸುತ್ತಿನ ಸೇವೆ ನಡೆಯುತ್ತದೆ. ಜಾತ್ರೆಯ ಅವಕೃತ ಸ್ನಾನ ಮುಗಿದ ರಾತ್ರಿಯಿಂದ ನಿತ್ಯ ರಾತ್ರಿ ನಡೆಯುತ್ತಿದ್ದ ವಸಂತಕಟ್ಟೆ ಪೂಜೆಯೂ ಈ ದಿನವೇ ಸಮಾಪ್ತಿಗೊಳ್ಳುತ್ತದೆ.





ಗರ್ಭಗುಡಿಗೆ ಸೇರುವ ವಿಶೇಷ ಪದ್ದತಿ: ವರ್ಷದ ಕೊನೆಯ ಬಲಿಯ ವೇಳೆ, ನಿತ್ಯದ ಬಲಿಮೂರ್ತಿಯನ್ನು ವಿವಿಧ ಹೂವು, ಹಿಂಗಾರದಿಂದ ಶೃಂಗರಿಸಲಾಗುತ್ತದೆ. ಪತ್ತನಾಜೆಯ ದಿನ ಪುಷ್ಪಕನ್ನಡಿ ( ಅಟ್ಟಿ )ಕಟ್ಟುವ ಸಂಪ್ರದಾಯವಿಲ್ಲ. ಬಲಿ ಉತ್ಸವದ ಅಂತಿಮದಲ್ಲಿ ಗರ್ಭಗುಡಿಯ ಪಾಣಿಪೀಠದಲ್ಲಿರುವ ಬಲಿಮೂರ್ತಿಯ ಸ್ವಸ್ಥಾನಕ್ಕೆ ಸ್ಪರ್ಶಿಸಿ ಬಂದು ಗರ್ಭಗುಡಿಯ ಎದುರಿನ ದ್ವಾರದಲ್ಲಿ ಭಕ್ತರಿಗೆ ದೇವರ ದರುಶನ ಮಾಡಿಸುವಂತೆ ಮೂರು ಬಾರಿ ನಡೆದು ದೇವರನ್ನು ಸ್ವಸ್ಥಾನದಲ್ಲಿರಿಸಲಾಗುತ್ತದೆ.
ಫಲಹಾರ-ನೈವೇದ್ಯ: ವಸಂತ ಕಟ್ಟೆಯಲ್ಲಿ ಈ ದಿನ ದೇವರಿಗೆ ಕಡ್ಲೆ, ಅವಲಕ್ಕಿ
ಪ್ರಭಾವ ವಲಯ ಸ್ಪರ್ಶಿಸುವಂತಿಲ್ಲ ಮೂಲ ಪ್ರತಿಷ್ಠಾಪಿತ ಅಥವಾ
ಸ್ವಯಂ ಭೂ ಆರೂಢ ದೇವರ ಇಲ್ಲಿ ಬೆಳ್ಳಿಯ ಮುಖಕವಚ ಹೊಂದಿದ ಬಿಂಬ ) ಬಿಂಬದಲ್ಲಿ 99 ಅಂಶದಷ್ಟು ಅಗಾಧಶಕ್ತಿಯು ಆವೃತವಾಗಿರುತ್ತದೆ. ಚರ -ಬಲಿಮೂರ್ತಿಯಲ್ಲಿ ಒಂದಂಶದ ಶಕ್ತಿಯು ಹೊರಹೊಮ್ಮುತ್ತದೆ. ಬಲಿಮೂರ್ತಿಯನ್ನು ಯಾವುದೇ ಕಾರಣಕ್ಕೂ ಮೂಲ ಆರೂಢ ಬಿಂಬಕ್ಕೆ ಸ್ಪರ್ಶಿಸುವಂತಿಲ್ಲ.. ಕಾಲ ಕಾಲಕ್ಕೆ ವ್ಯಕ್ತಿಗಳು ಬದಲಾದರೂ ಪದ್ಧತಿಗಳು ನಿರಂತರ ಪಾಲನೆಯಾದಾಗ ಕ್ಷೇತ್ರಕ್ಕೆ
ಶ್ರೇಯಸ್ಸು ಪಿ. ಜಿ. ಚಂದ್ರಶೇಖರ ರಾವ್ ಧಾರ್ಮಿಕ ಅಧ್ಯಯನಕಾರ
ವಿವಿಧ ಹಣ್ಣು ಹಂಪಲುಗಳು, ಬೆಲ್ಲದಪಾನಕವನ್ನು ಸಮರ್ಪಿಸಿ ನೆರೆದ ಭಕ್ತರಿಗೆ ವಿತರಿಸಲಾಗುತ್ತದೆ.

Continue Reading
Click to comment

Leave a Reply

Your email address will not be published. Required fields are marked *

Advertisement