Published
7 months agoon
By
Akkare Newsಕಡಬ, ಮೇ.23. ಬೈಕಿನಲ್ಲಿ ತೆರಳುತ್ತಿದ್ದಾಗ ಕಳೆದು ಹೋಗಿದ್ದ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗನ್ನು ವಾರಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದ ಘಟನೆ ಕಡಬ ಸಮೀಪದ ಕಳಾರ ಎಂಬಲ್ಲಿ ಬುಧವಾರದಂದು ನಡೆದಿದೆ.
ಕಲ್ಲುಗುಡ್ಡೆ ಮಾಪಳ ನಿವಾಸಿ ಚೇತನ್ ಎಂಬವರು ಬುಧವಾರದಂದು ತನ್ನ ಬೈಕಿನಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಕಳಾರ ಸಮೀಪ ಬ್ಯಾಗ್ ಕಳೆದು ಹೋಗಿದೆ ಎನ್ನಲಾಗಿದೆ. ಆಲಂಕಾರು ತಲುಪಿದಾಗ ಬ್ಯಾಗ್ ಇಲ್ಲದೇ ಇರುವುದನ್ನು ಗಮನಿಸಿದ ಚೇತನ್ ತಕ್ಷಣವೇ ಬ್ಯಾಗ್ ಕಳೆದುಹೋಗಿರುವ ಬಗ್ಗೆ ವಾಟ್ಸ್‌ಅಪ್ ಗ್ರೂಪ್‌ಗಳಲ್ಲಿ ಸಂದೇಶ ರವಾನಿಸಿದ್ದಾರೆ. ಈ ನಡುವೆ ಕಳೆದು ಹೋಗಿದ್ದ ಬ್ಯಾಗ್ ಕಳಾರ ನಿವಾಸಿ ಇಸ್ಮಾಯಿಲ್ ಬಿಡಿಎಸ್ ಎಂಬವರಿಗೆ ರಸ್ತೆ ಬದಿಯಲ್ಲಿ ಸಿಕ್ಕಿದ್ದು, ಬ್ಯಾಗನ್ನು ತೆರೆದು ನೋಡಿದಾಗ ಸುಮಾರು ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಲ್ಯಾಪ್‌ಟಾಪ್ ಇರುವುದು ಕಂಡುಬಂದಿದೆ. ತಕ್ಷಣವೇ ವಾಟ್ಸ್ಅಪ್ ನಲ್ಲಿ ಬಂದ ಸಂಖ್ಯೆಯನ್ನು ಸಂಪರ್ಕಿಸಿ ವಾರಸುದಾರರನ್ನು ಕರೆಸಿ ಪ್ರಾಮಾಣಿಕವಾಗಿ ಹಿಂತಿರುಗಿಸಿದ್ದಾರೆ. ಇವರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.