Published
7 months agoon
By
Akkare Newsಬೆಳ್ತಂಗಡಿ: ತೆಂಕಕಾರಂದೂರು ಗ್ರಾಮದ ಪಲ್ಕೆ ಎಂಬಲ್ಲಿ ಮೇ. 22 ರಂದು ಮಧ್ಯರಾತ್ರಿ ಬಳಿಕ ಎರಡು ಮನೆಗಳಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ.
ಪಲ್ಕೆ ನಿವಾಸಿ ಪ್ರೇಮ ಶೆಟ್ಟಿ ಎಂಬವರ ಮನೆಯಲ್ಲಿ ತಮ್ಮ ಮಗ ವೃದ್ಧೆ ತಾಯಿ ಜತೆ ಇರುವಾಗಲೇ ತಡರಾತ್ರಿ ಹಿಂಬದಿ ಬಾಗಿಲು ಒಡೆದು ರೂಮ್ ನಲ್ಲಿರುವ ಕಪಾಟು ಹೊಡೆದು ಸುಮಾರು 20 ಪವನ್ ಚಿನ್ನ, ಇತರ ದಾಖಲೆಗಳ ಬ್ಯಾಗನ್ನೇ ಎಗರಿಸಿ ಪರಾರಿಯಾಗಿದ್ದಾರೆ. ಕಪಾಟಿನ ಸಮೀಪವೇ ಮನೆಮಂದಿ ಮಲಗಿದ್ದರೂ ಕಳ್ಳರು ಚಾಣಾಕ್ಷತನದಿಂದ ಕದ್ದಿದ್ದು, ಮನೆಮಂದಿಗೆ ಎಚ್ಚರವಾಗಿರಲಿಲ್ಲ.
ಪ್ರೇಮಾ ಅವರ ಮನೆಯಿಂದ ಕೇವಲ 200 ಮೀಟರ್ ಸಮೀಪದಲ್ಲಿರುವ ಕರಂಬಾರು ಗ್ರಾಮದ ಮುಂಡೆಲ್ ವಿಶ್ವನಾಥ ಶೆಟ್ಟಿಯವರ ಮನೆಯಲ್ಲೂ ಕಳ್ಳತನ ನಡೆಸಲಾಗಿದೆ.
ಮನೆಯವರ ಸಂಬಂಧಿಕರ ಮನೆಯಲ್ಲಿ ಕೋಲ ಇರುವ ಕಾರಣ ಸಂಜೆ ತೆರಳಿದ್ದು ಮನೆಯ ಬಾಗಿಲು ಒಡೆದು 4 ಪವನ್ ಚಿನ್ನ ಕದ್ದು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.